Breaking News

ಹುಬ್ಬಳ್ಳಿಯಲ್ಲಿ ಐತಿಹಾಸಿಕ ದೇವಸ್ಥಾನದ ದೇವರ ವಿಗ್ರಹ ಭಗ್ನ

ಹುಬ್ಬಳ್ಳಿ: ಐತಿಹಾಸಿಕ ದೇವಸ್ಥಾನದ ದೇವರ ವಿಗ್ರಹವನ್ನು ಭಗ್ನಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಉದಿಗ್ನ ವಾತಾವರಣ ನಿರ್ಮಾಣವಾಗಿದೆ.

ಇಲ್ಲಿನ ದೇಶಪಾಂಡೆ ನಗರದಲ್ಲಿ ಈ ವೊಂದು ಘಟನೆ ನಡೆದಿದ್ದು, ಅಪರ್ಣಾ ಅಪಾರ್ಟೆಂಟ್ ಹತ್ತಿರದ ದತ್ತಾತ್ರೇಯ ದೇವಸ್ಥಾನದಲ್ಲಿನ ದತ್ತಾತ್ರೇಯ ದೇವರ ವಿಗ್ರಹದ ನಾಲ್ಕು ಕೈಗಳನ್ನು ಮುರಿದು ವಿರೂಪಗೊಳಿಸಿದ್ದಾರೆ.

ಇನ್ನು ಸುಮಾರು 20 ವರ್ಷದ ಹಿಂದಿನ ಇತಿಹಾಸ ಹೊಂದಿರುವ ದೇವಸ್ಥಾನ ಇದಾಗಿದೆ. ಕಳೆದ ಶನಿವಾರ ರಾತ್ರಿ ನವರಾತ್ರಿ ಹಿನ್ನೆಲೆಯ ಸ್ಥಳೀಯ ನಿವಾಸಿಗಳು ದಾಂಡಿಯಾ ನೃತ್ಯ ಮುಗಿಸಿದ್ದಾರೆ.ಬೆಳಿಗ್ಗೆ ದೇವಸ್ಥಾನಕ್ಕೆ ಬಂದು ನೋಡಿದಾಗ ದೇವರ ಮೂರ್ತಿ ಭಗ್ನಗೊಂಡಿರುವುದು ಬೆಳಕಿಗೆ ಬಂದಿದೆ.

ಸದ್ಯ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ದೇವರ ಮೂರ್ತಿ ವಿರೂಪಗೊಳಿಸಿದ ದುರ್ಷಮಿ್ರಗಳನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಭಕ್ತರು ಆಗ್ರಹಿಸಿದ್ದಾರೆ.

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *