ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಆಟೊಕ್ಕೆ ಏಕಾಏಕಿ ಬೆಂಕಿ ತಗುಲಿ ಆಟೊ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಧಾರವಾಡದ ರಾಜೀವಗಾಂಧಿ ನಗರದಲ್ಲಿ ಸಂಭವಿಸಿದೆ.
ಮಹ್ಮದ್ ಅಬೂಬಕರ ಎಂಬುವವರಿಗೆ ಸೇರಿದ ಆಟೊ ಸುಟ್ಟು ಕರಕಲಾಗಿದೆ. ಈ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ.ರಾತ್ರೋರಾತ್ರಿ ಆಟೊಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯವರು ನೋಡುವಷ್ಟರಲ್ಲಿ ಎಂಜಿನ್ ಸಮೇತ ಆಟೊ ಹೊತ್ತಿ ಉರಿದಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

