Breaking News

ಟೊಮೆಟೊಗೆ ಬಂಪರ್ ಬೆಲೆ: ರೈತರ ಮೊಗದಲ್ಲಿ ಸಂತಸ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಪ್ರಮುಖ ತೋಟಗಾರಿಕಾ ಬೆಳೆ ಟೊಮೆಟೊಗೆ ಈಗ ಬಂಪರ್ ಬೆಲೆ ಬಂದಿದ್ದು, ಜೂನ್ ಜುಲೈನಲ್ಲಿ ಉತ್ತಮ ದರವಿತ್ತು ಆ ನಂತರ ದರ ಕುಸಿಯಿತು. ಈಗ ಮತ್ತೆ ಉತ್ತಮ ದರ ಬಂದಿದೆ ಇದರಿಂದ ಸಹಜವಾಗಿ ರೈತರ ಮುಖದಲ್ಲಿ ಸಂತಸ ಮೂಡಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ದರ್ಜೆಯ ಒಂದು ಕೆ.ಜಿ ಟೊಮೆಟೊ ಬೆಲೆ ₹ 80ರಿಂದ 85 ಇದೆ. ಗುಣಮಟ್ಟದ ಹಣ್ಣು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ರವಾನೆ ಆಗುತ್ತಿದೆ. ಇದೇ ತೂಕದ ಮಧ್ಯಮ ಗುಣಮಟ್ಟದ ಟೊಮೆಟೊ ₹ 700ರಿಂದ 800, ಮೂರನೇ ದರ್ಜೆಯ ಟೊಮೆಟೊ 300ರಿಂದ 350 ಮಾರಾಟವಾಗುತ್ತಿದೆ. ಎರಡು ವಾರಗಳ ಹಿಂದೆ ಬೆಲೆಯು ಈಗಿನ ಬೆಲೆಯ ಅರ್ಧದಷ್ಟಿತ್ತು. ಹೀಗೆ ಬೆಲೆ ಹೆಚ್ಚಳವಾಗುತ್ತಿರುವ ಕಾರಣ ಕಳಪೆ ಟೊಮೆಟೊಗಳಿಗೂ ಬೇಡಿಕೆ ಕುದುರಿದೆ.
ಚಿಕ್ಕಬಳ್ಳಾಪುರದ ಬಜಾರ್ ರಸ್ತೆಯ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟೊಮೆಟೊ ಬೆಲೆ ₹ 80ರಿಂದ 85 ಇದೆ. ಆದರೆ ಈ ಟೊಮೆಟೊ ಮಧ್ಯಮ ಗುಣಮಟ್ಟದ್ದಾಗಿದೆ. ಉತ್ತಮ ಗುಣಮಟ್ಟದ ಟೊಮೆಟೊವನ್ನು ಇಲ್ಲಿ ಮಾರಾಟ ಮಾಡುತ್ತಿಲ್ಲ. ಅದು ಜಿಲ್ಲೆಯಿಂದ ಹೊರ ಹೋಗುತ್ತಿದೆ ಎಂದು ರೈತರೊಬ್ಬರು ತಿಳಿಸಿದ್ದಾರೆ.
ಒಂದು ಕೆರೆಯಲ್ಲಿ ಟೊಮೆಟೊ ಬೆಳೆದಿದ್ದೇವೆ ಮೂರು ದಿನಕ್ಕೆ ಒಮ್ಮೆ 100ರಿಂದ 120 ಬಾಕ್ಸ್ ಹಣ್ಣು ಕೀಳುತ್ತಿದ್ದೇವೆ. ಟೊಮೆಟೊಗೆ ಬೇಡಿಕೆ ಹೆಚ್ಚಿದೆ. ₹ 80 ಸಾವಿರದಿಂದ ₹ 90 ಸಾವಿರ ವೆಚ್ಚ ಮಾಡಿದ್ದೇವೆ. ಈ ಹಿಂದಿನ ಬೆಳೆಗಳಲ್ಲಿ ನಷ್ಟ ಅನುಭವಿಸಿದ್ದೆವು. ಈ ಬಾರಿ ಖುಷಿ ತಂದಿದೆ ಎಂದು ಗುಡಿಬಂಡೆ ತಾಲ್ಲೂಕಿನ ಕೊಂಡರೆಡ್ಡಿ ಹಳ್ಳಿಯ ರೈತರ ಗಣೇಶ್ ತಿಳಿಸಿದರು.
ರಾಜ್ಯದಲ್ಲಿಯೇ ಟೊಮೆಟೊ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಬಾಗೇಪಲ್ಲಿ ಮಾರುಕಟ್ಟೆಗಳಿಂದ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ಟೊಮೆಟೊ ರವಾನೆ ಆಗುತ್ತದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *