ಬೆಳಗಾವಿ: ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ₹2.68 ಕೋಟಿ ಸಂಗ್ರಹಿಸಿ, ಬಳಿಕ ದರೋಡೆ ಮಾಡಿದ್ದ ಪ್ರಕರಣವನ್ನು ಮೂಡಲಗಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಾನ್‌ಸ್ಟೆಬಲ್ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿ ₹2.39 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಪೊಲೀಸ್ ಕಾನ್‌ಸ್ಟೆಬಲ್ ಚಿದಾನಂದ ಕುರಬೆಟ್ ಈ ಕೃತ್ಯದ ಕಿಂಗ್‌ಪಿನ್ ಎನ್ನಲಾಗಿದೆ. ₹1 ಲಕ್ಷಕ್ಕೆ ₹1.30 ಲಕ್ಷ ನೀಡುವುದಾಗಿ ನಂಬಿಸಿ ಐವರಿಂದ ಒಟ್ಟು ₹2.68 ಕೋಟಿ ಸಂಗ್ರಹಿಸಿದ್ದ. ಅಕ್ಟೋಬರ್ 30ರಂದು ಹಣ ಎಣಿಸುವ ನೆಪದಲ್ಲಿ ಶೆಡ್‌ಗೆ ಹಣ ತರಿಸಿ, ಖಾರದಪುಡಿ ಎರಚಿ ಹಲ್ಲೆ ನಡೆಸಿ ಹಣ ದರೋಡೆ ಮಾಡಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದು, ₹2.39 ಕೋಟಿ ನಗದು, ಎರಡು ಬೈಕ್, ಕಾರು ಹಾಗೂ ಹಣ ಎಣಿಕೆ ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಉಳಿದ ₹29 ಲಕ್ಷ ಹಾಗೂ ಮತ್ತೊಬ್ಬ ಆರೋಪಿಗಾಗಿ ಶೋಧ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news
