Breaking News

ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ದ್ವೇಷ – ಪುರೋಹಿತನನ್ನೇ ಕೊಚ್ಚಿ ಕೊಂದ ದುಷ್ಕರ್ಮಿ!

ಬೆಳಗಾವಿ: ಅಂತರ್ಜಾತಿ ವಿವಾಹ ಮಾಡಿಸಿಕೊಟ್ಟಿದ್ದಕ್ಕೆ ಜ್ಯೋತಿಷಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮಂದಾರ್ ಅಜಿತ್ ರಾಂಡೆ (35) ಕೊಲೆಯಾದವರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾಸೋ ಅಲಿಯಾಸ್ ದೀಪಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಮಗಳು ಅನುಜಾ, ಕಳೆದ ಜನವರಿಯಲ್ಲಿ ಓಂಕಾರ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು. ಈ ಮದುವೆಯನ್ನು ಜ್ಯೋತಿಷಿ ಮಂದಾರ್ ಮಾಡಿಸಿಕೊಟ್ಟಿದ್ದರಿಂದ ಆರೋಪಿ ದ್ವೇಷ ಬೆಳೆಸಿಕೊಂಡು ಕೊಲೆಗೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಅಕ್ಟೋಬರ್ 31ರಂದು ಮತ್ತೊಂದು ಮದುವೆಯ ನೆಪದಲ್ಲಿ ಮಂದಾರ್ ಅವರನ್ನು ಮಾನಕಾಪುರಕ್ಕೆ ಕರೆಸಿಕೊಂಡ ಆರೋಪಿ, ಕಣ್ಣಿಗೆ ಖಾರದಪುಡಿ ಎರಚಿ ಕುಡುಗೋಲಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಸದಲಗಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

6ನೇ ತರಗತಿ ಮೇಲೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿ ಬಂಧನ

ಮುಂಡಗೋಡ: ಆರನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ 65 ವರ್ಷದ ಇಸ್ಮಾಯಿಲ್ ಹುಲಗೂರ …

Leave a Reply

Your email address will not be published. Required fields are marked *