Breaking News

ಮಠದ ವಿಗ್ರಹ ಮಾರಾಟ ಆರೋಪ: FIR ದಾಖಲಾಗುತ್ತಿದ್ದಂತೆ ಬ್ರಹ್ಮಾವರದ ಬಾಳೆಕುದ್ರು ಮಠಾಧೀಶರು ನಾಪತ್ತೆ

ಉಡುಪಿ: ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದ ಮಠಾಧೀಶ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ನಾಪತ್ತೆಯಾಗಿದ್ದಾರೆ. ಮಠದಲ್ಲಿದ್ದ ಪುರಾತನ ವಿಗ್ರಹಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿದ ಆರೋಪ ಸ್ವಾಮೀಜಿ ವಿರುದ್ಧ ಕೇಳಿಬಂದಿದೆ. ಮಠದಲ್ಲಿದ್ದ ನರಸಿಂಹ, ಗಣಪತಿ, ಮಹಿಷಮರ್ದಿನಿ ಸೇರಿದಂತೆ ಆರು ವಿಗ್ರಹಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಶಿಷ್ಯ ಜಗದೀಶ್ ಐತಾಳ್ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ವಿಗ್ರಹಗಳು ವೆಬ್‌ಸೈಟ್‌ನಲ್ಲಿ ಮಾರಾಟಕ್ಕಿರುವುದು ಕಂಡುಬಂದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಎಫ್‌ಐಆರ್ ದಾಖಲಾಗುತ್ತಿದ್ದಂತೆ ಸ್ವಾಮೀಜಿ ಮಠಕ್ಕೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ವಿಗ್ರಹ ಮಾರಾಟಕ್ಕೆ ಸಂಬಂಧಿಸಿದಂತೆ ಕಂಪನಿ ಮಾಲೀಕ ನಾಗೇಂದ್ರ ಪ್ರಸಾದ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸ್ವಾಮೀಜಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Share News

About BigTv News

Check Also

ಅಂತರ್ಜಾತಿ ವಿವಾಹ ಮಾಡಿಸಿದ್ದಕ್ಕೆ ದ್ವೇಷ – ಪುರೋಹಿತನನ್ನೇ ಕೊಚ್ಚಿ ಕೊಂದ ದುಷ್ಕರ್ಮಿ!

ಬೆಳಗಾವಿ: ಅಂತರ್ಜಾತಿ ವಿವಾಹ ಮಾಡಿಸಿಕೊಟ್ಟಿದ್ದಕ್ಕೆ ಜ್ಯೋತಿಷಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಾನಕಾಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಮಂದಾರ್ ಅಜಿತ್ ರಾಂಡೆ …

Leave a Reply

Your email address will not be published. Required fields are marked *