Breaking News

ಸರ್ಕಾರದಿಂದ ಬಡವರಿಗೆ ಉಚಿತ ಯೋಜನೆಗಳನ್ನು ನೀಡುವುದು ಸರಿಯಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ : ಬಡವರಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಸೌಲಭ್ಯಗಳಿಗೆ ತಮ್ಮ ವಿರೋಧ ಇದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉಚಿತ ಯೋಜನೆಗಳ ವೆಚ್ಚವನ್ನು ಸರ್ಕಾರ ಭರಿಸೋಕೆ ಅನೇಕ ಸವಾಲುಗಳು ಎದುರಾಗುತ್ತವೆ. ಹೆಚ್ಚು ದಿನ ಯೋಜನೆಗಳನ್ನು ಬಡವರಿಗೆ ನೀಡಲಾಗುವುದಿಲ್ಲ.
ಸಂಪನ್ಮೂಲ ಕೊರತೆಯಿಂದ ಅರ್ಧದಲ್ಲಿಯೇ ಕೆಲವು ಯೋಜನೆಗಳು ನೆಲಕಚ್ಚುತ್ತವೆ ಎಂದು ನಿರ್ಮಲ ಸೀತಾರಾಮನ್ ಹೇಳಿದ್ದಾರೆ.
ಯಾವುದೇ ರಾಜ್ಯ ಸರ್ಕಾರ ಉಚಿತವಾಗಿ ಯೋಜನೆಗಳನ್ನು ನೀಡುತ್ತಿದರೆ ಅದಕ್ಕೆ ಪೂರಕವಾಗಿ ಆರ್ಥಿಕ ಸಂಪನ್ಮೂಲ ಅಥವಾ ಪರ್ಯಾಯ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕು. ಇಲ್ಲದಿದ್ದರೆ ಹೆಚ್ಚು ದಿನ ಯೋಜನೆ ನಡೆಸೋಕೆ ಸಾಧ್ಯವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಆದಾಯ ಹಾಗೂ ಖರ್ಚು ಸರಿದೂಗಿಸಲು ಶಿಸ್ತು ಮುಖ್ಯ. ಸರ್ಕಾರಕ್ಕೆ ರೆವಿನ್ಯೂ ಹೆಚ್ಚಾಗಿ ಬಾರದಿದ್ರೆ ಅನೇಕ ಕಷ್ಟ ಎದುರಿಸಬೇಕಾಗುತ್ತದೆ. ಯಾವುದೇ ನಿರ್ದಿಷ್ಟ ಯೋಜನೆ ದೀರ್ಘಕಾಲದವರೆಗೆ ಮುಂದುವರೆಸಲು ಸಾಧ್ಯವಾಗಲ್ಲ ಎಂದು ನಿರ್ಮಲಾ ಸೀತಾರಾಮನ್ ವಿಶ್ಲೇಷಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *