ಬೆಂಗಳೂರು: ಒಂದೇ ದಿನ 18622 ಸೋಂಕಿತರು ಮಾತ್ರ ಪತ್ತೆಯಾಗಿದ್ದಾರೆ.ಇದು ನಿನ್ನೆ ದಾಖಲಾಗಿದ್ದ ಸೋಂಕಿತರಿಗಿಂತ 3 ಸಾವಿರ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ.ವೀಕೆಂಡ್ ಕರ್ಫ್ಯೂ ಜಾರಿಯಿಂದಾಗಿ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ.
ಶನಿವಾರ ಬೆಂಗಳೂರಿನಲ್ಲಿ 22317 ಸೋಂಕಿತರು ಪತ್ತೆಯಾಗಿದ್ದರು, ವಿಕೇಂಡ್ ಕರ್ಫ್ಯೂ ಆರಂಭದ ಮೊದಲ ದಿನ ಅಂದರೆ ನಿನ್ನೆ 21092 ಸೋಂಕಿತರು ಪತ್ತೆಯಾಗಿದ್ದರು. ಇಂದು ನಿನ್ನೆಗಿಂತ 3 ಸಾವಿರ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ವಾರದ ಆರಂಭದಲ್ಲಿ ಅಬ್ಬರಿಸುವ ಕೊರೊನಾ ಸೋಂಕಿನ ಪ್ರಮಾಣ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಇಳಿಮುಖವಾಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸರ್ಕಾರ ಮತ್ತೆ ಕೆಲ ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸುವ ಸಾಧ್ಯತೆಗಳಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

