ನವಲಗುಂದ: ಕಾಲವಾಡ ಗ್ರಾಮದ 45 ವರ್ಷದ ಲಕ್ಷ್ಮಣ ಹಣಮಂತಪ್ಪ ಬಾರಕೇರ ಎಂಬ ರೈತ ತನ್ನ ಜಮೀನಿಗೆ ಹೋದ ಸಮಯದಲ್ಲಿ ಏಕಾಏಕಿ ಬೆಣ್ಣೆಹಳ್ಳದ ನೀರು ಬಂದದ್ದರಿಂದ ಅಲ್ಲಿಯೇ ಹತ್ತಿರದಲ್ಲಿದ್ದ ಕಲ್ಯಾಣ ಬಸವೇಶ್ವರ ದೇವಸ್ಥಾನ ಕಟ್ಟೆಯನ್ನೇರಿ ಮೂರು ದಿನಗಳಿಂದ ಅಲ್ಲಿಯೇ ಉಳಿದಿದ್ದ.
ಮೂರು ದಿನಗಳ ಕಾಲ ಊಟ, ನೀರು ಇಲ್ಲದೆ ಕುಳಿತ ಜಾಗದಲ್ಲೇ ಕುಳಿತ ಹನುಮಂತಪ್ಪನನ್ನು ಇಂದು ಬೆಳಿಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ರಕ್ಷಿಸಲಾಗಿದೆ.
ಘಟನೆ ತಿಳಿದ ತಕ್ಷಣ ಶಾಸಕ ಎನ್.ಎಚ್.ಕೋನರಡ್ಡಿ ಸ್ಥಳಕ್ಕೆ ಭೇಟಿ ನೀಡಿ ರಕ್ಷಣೆ ಕಾರ್ಯ ಮುಗಿಯುವವರೆಗೆ ಸ್ಥಳದಲ್ಲೇ ಇದ್ದು, ಗ್ರಾಮಸ್ಥರಿಗೆ ನೀರಿನ ಹರಿವು ಹೆಚ್ಚಾದರೆ ಮುಂಜಾಗ್ರತೆ ಕ್ರಮ ವಹಿಸಿ ಎಂದರು. ತಹಶೀಲ್ದಾರ ಸುಧೀರ ಸಾಹುಕಾರ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‌ಐ ಜನಾರ್ದನ
ಭಟ್ರಳ್ಳಿ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವರಾಜ ಜಿ.ಕೆ, ಎಎಸ್‌ಐ ಜಿ.ವಾಯ್. ರಾಯಭಾಗ ಹಾಗೂ ಸಿಬ್ಬಂದಿಗಳು ಗ್ರಾಮ ಪಂಚಾಯತಿ ಅಧಿಕಾರಿಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

