Breaking News

ಮಹಾರಾಷ್ಟ್ರ ರಾಜ್ಯ ಕೌಟಿಲ್ಯ ವಿಶ್ವವಿದ್ಯಾಲಯಕ್ಕೆ ರತನ್ ಟಾಟಾ ವಿವಿ ಎಂದು ಮರುನಾಮಕರಣ

ಮಂಬೈ : ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯವನ್ನು ಪದ್ಮವಿಭೂಷಣ ರತನ್ ಟಾಟಾ ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಸೋಮವಾರ ತಿಳಿಸಿದ್ದಾರೆ .
ಅಕ್ಟೋಬರ್ 9 ರಂದು ಮುಂಬೈನಲ್ಲಿ ಕೊನೆಯುಸಿರೆಳೆದ ದಿವಂಗತ ಭಾರತೀಯ ಐಕಾನ್ ಮತ್ತು ಕೈಗಾರಿಕೋದ್ಯಮಿ ರತನ್ ಟಾಟಾ ಅವರನ್ನು ಗೌರವಿಸಲು ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.
ಕೌಶಲ್ಯ ಅಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಕೌಶಲ್ಯ ಅಭಿವೃದ್ಧಿ ಕ್ಷೇತ್ರಕ್ಕೆ ರತನ್ ಟಾಟಾ ಅವರ ಕೊಡುಗೆಗಳನ್ನು ಗೌರವಿಸಿ ಈ ಘೋಷಣೆ ಮಾಡಿದ್ದಾರೆ.ರತನ್ ಟಾಟಾ ಬುಧವಾರ ರಾತ್ರಿ (ಅಕ್ಟೋಬರ್ 9, 2024) ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾದರು. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗೌರವಿಸಲು ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಮುಂಬೈನ ಕೋಶಾಲಯ ವಿಶ್ವವಿದ್ಯಾಲಯಕ್ಕೆ ರತನ್ ಟಾಟಾ ಅವರ ಹೆಸರಿಡಲಾಗಿದೆ. ಹೆಸರು ಬದಲಾವಣೆಯ ನಂತರ, ವಿಶ್ವವಿದ್ಯಾಲಯದ ಹೆಸರನ್ನು ಈಗ ಪದ್ಮ ವಿಭೂಷಣ ರತನ್ ಟಾಟಾ ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *