Breaking News

ಕೋರ್ಟ್ ಗೆ ಹಾಜರಾಗುವಂತೆ ರೈತನಿಗೆ ನೋಟಿಸ್ ಜಾರಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿ ರೈತ ಸಾಲ ಮನ್ನಾ ಜತೆಗೆ ಯಾವುದೇ ರೈತರಿಗೆ ನೋಟಿಸ್, ವಾರೆಂಟ್ ಕೊಡಬಾರದು ಎಂದು ಆದೇಶ ಹೊರಡಿಸಿದ್ದಾರೆ. ಆದರೇ ಆದೇಶವನ್ನು ಎಲ್ ಅಂಡ್ ಟಿ ಫೈನಾನ್ಸ್ ಕಂಪನೆ ಗಾಳಿಗೆ ತೂರಿದೆ. ಇದೀಗ ಬೆಳಗಾವಿ ಜಿಲ್ಲೆಯ ಅನ್ನದಾತರನಿಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದ್ದು ಇದೇ 19ರಂದು ಕೋಲ್ಕತ್ತಾ ಕೋರ್ಟ್ ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದು ರೈತರ ತೀವ್ರ ಆಘಾತವನ್ನು ಉಂಟು ಮಾಡಿದ್ದು, ಸಹಾಯಕ್ಕಾಗಿ ಸರ್ಕಾರ ಕಡೆ ನೋಡುವಂತಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದ ರೈತ ಲಕ್ಷ್ಮಣ ಹಂಚಿನಾಳ್ ಗೆ ಸಮನ್ಸ್ ಜಾರಿಯಾಗಿದೆ. 2011ರಲ್ಲಿ ಎಲ್ ಅಂಡ್ ಟಿ ಫೈನಾನ್ಸ್ ನಲ್ಲಿ ಲೋನ್ ಮಾಡಿ ಟ್ರ್ಯಾಕ್ಟರ್ ಖರೀದಿ ಮಾಡಿದ್ದರು. ಆದರೇ ಎರಡು ಕಂತು ಕಟ್ಟದೇ ಇರೋ ಹಿನ್ನೆಲೆಯಲ್ಲಿ ಸಮನ್ಸ್ ಜಾರಿಯಾಗಿದೆ. ರೈತ ತನ್ನ ಜಮೀನಿನಲ್ಲಿ ಕಬ್ಬು ಬೆಳೆದು ಕಾರ್ಖಾನೆಗೆ ಪೂರೈಸಿದ್ದ ಕಾರ್ಖಾನೆಯಿಂದ ಇನ್ನೂ ಬಾಕಿ ಹಣ ಪಾವತಿ ಆಗಿಲ್ಲ. ಹೀಗಾಗಿ ಸ್ವಲ್ಪ ದಿನ ಕಂತು ಕಟ್ಟಲು ಅವಕಾಶ ಕೇಳಿದ್ರು ಫೈನಾನ್ಸ್ ಸಿಬ್ಬಂದಿ ರೈತನ ಮಾತಿಗೆ ಕಿವಿ ಕೊಟ್ಟಿಲ್ಲ. ಇದೀಗ ಇದೇ 19ರಂದು ಕೊಲ್ಕತಾ ಕೋರ್ಟ್ ಹಾಜರಾಗುವಂತೆ ಸಮನ್ಸ್ ಜಾರಿಯಾಗಿದ್ದು, ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದ್ದಾರೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *