Breaking News

ಉತಾರ ಬದಲಿಸುವಂತೆ ಮನವಿ ಸಲ್ಲಿಕೆ

ಕುಂದಗೋಳ : ಕಡಪಟ್ಟಿ ಗ್ರಾಮದ ಅಂಗನವಾಡಿ-1 ರ ಕಟ್ಟಡದ ಇ ಸ್ವತ್ತು ಉತಾರದ ಜಾಗವನ್ನು ಕೊಂಡವಾಡ ಎಂಬುದರ ಬದಲಾಗಿ ಅಂಗನವಾಡಿ-1 ಎಂದು ನಮೂದಿಸಿ ಉತಾರ ಪೂರೈಸಲು ಕಡಪಟ್ಟಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಸಪ್ಪ ಕುರಿ ಗ್ರಾಮಸ್ಥರಾದ ಸಂತೋಷ ನೆಲ್ಲೂರು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮನವಿ ಮಾಡಿದ್ದಾರೆ.

ಶಾಸಕ ಎಂ.ಆ‌ರ್.ಪಾಟೀಲ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು ಅಂಗನವಾಡಿ ಕಟ್ಟಡ ಕಳೆದ 20 ವರ್ಷಗಳಿಂದ ಕೊಂಗವಾಡ ಜಾಗದಲ್ಲಿದೆ.

ಇಲ್ಲಿಯವರೆಗೆ ಇ ಸ್ವತ್ತು ಉತಾರ ದೊರೆತಿಲ್ಲ, ಇದೀಗ ನೂತನ ಅಂಗನವಾಡಿ ಕಟ್ಟಡಕ್ಕೆ ಅನುದಾನ ಬಂದಿದ್ದು ಕಟ್ಟಡ ಕಾಮಗಾರಿ ಕೈಗೊಳ್ಳಲು ಇ ಸ್ವತ್ತು ಉತಾರದ ಮಾಹಿತಿ ಅಡ್ಡಿಯಾಗಿದೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಅನುವು ಮಾಡಿ ಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

Share News

About Shaikh BigTv

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *