Breaking News

ಕಿತ್ತೂರಿನಲ್ಲಿ ಅತ್ಯಾಧುನಿಕ ಥೀಮ್ ಪಾರ್ಕ್ ಶೀಘ್ರ ಅನುಷ್ಠಾನ

ಚನ್ನಮ್ಮನ ಕಿತ್ತೂರು: ಐತಿಹಾಸಿಕ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಕಿತ್ತೂರು ಸಂಸ್ಥಾನ, ರಾಣಿ ಚನ್ನಮ್ಮನ ಶೌರ್ಯ, ಸಾಹಸ, ಜೀವನ ಶೈಲಿ, ರಾಣಿ ಮತ್ತು ಸೇನಾನಿಗಳ ಹೋರಾಟದ ಕಥನವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಿತ್ತರಿಸುವ ಥೀಮ್ ಪಾರ್ಕ್ ಶೀಘ್ರ ಅನುಷ್ಠಾನಗೊಳ್ಳಲಿದೆ.
ಇದಕ್ಕಾಗಿ ಕೋಟೆ ಆವರಣದೊಳಗಿರುವ ಸುಮಾರು ಏಳು ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಈಗಿನ ಯುಗದ ಪೀಳಿಗೆ ಅರಿಯುವ ಹಾಗೆ ಆಧುನಿಕ ತಂತ್ರಜ್ಞಾನದ ಈ ಥೀಮ್ ಪಾರ್ಕ್ ಯೋಜನೆ ಜಾರಿ ದೇಶದಲ್ಲಿಯೇ ಪ್ರಥಮ ಎಂದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಮೂಲಗಳು ತಿಳಿಸುತ್ತವೆ. ಅಂದು ಕೊಂಡಂತೆ ಅನುಷ್ಠಾನಗೊಂಡರೆ ಹೆಚ್ಚಿನ ಪ್ರವಾಸಿಗರನ್ನು ಕಿತ್ತೂರು ಕಡೆಗೆ ಸೆಳೆಯಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ.
ಥೀಮ್ ಪಾರ್ಕ್ ಯೋಜನೆ ಜಾರಿಗೆ ರಾಜ್ಯ ಸರ್ಕಾರವು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 30 ಕೋಟಿ ಬಿಡುಗಡೆ ಮಾಡಿದೆ. ಯೋಜನೆಯ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಎಂಡರಾಯ್ಡ್ ಮೊಬೈಲ್ ಸಾಧನ ಮೂಲಕ ಕೋಡ್ ಸ್ಕ್ಯಾನ್ ಮಾಡಿದರೆ ಪರದೆ ಮೇಲೆ ಇತಿಹಾಸ ಅರಿಯುವ ಸಾಹಿತ್ಯವು ತಂತ್ರಜ್ಞಾನದಲ್ಲಿ ಪ್ರದರ್ಶನವಾಗಲಿದೆ ಇದು ದೇಶದಲ್ಲಿಯೇ ವಿಶೇಷ ಪ್ರಯತ್ನವಾಗಿದೆ.
ಕಲಾ ಗ್ಯಾಲರಿ, ಬರ್ಮೆಡ್ ಗ್ರೀನ್, ಹೂವಿನ ಹಾಸು, ಎತ್ತರಕ್ಕೆ ಚಿಮ್ಮುವ ಬಣ್ಣಗಳ ಕಾರಂಜಿ, ಗ್ಯಾಲರಿ, ಪ್ರತಿಮೆ, ತಿನಿಸುಕಟ್ಟೆ, ಮೂಲ ಸೌಲಭ್ಯ ಸೇರಿ ಅನೇಕ ವ್ಯವಸ್ಥೆಗಳನ್ನು ಥೀಮ್ ಪಾರ್ಕ್ ಒಳಗೊಂಡಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದ್ದಾರೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *