ನವಲಗುಂದ: ಬೆಳೆ ಸಮೀಕ್ಷೆ (ಖಾಸಗಿ ನಿವಾಸಿ) ಗಾರರಿಗೆ ಭದ್ರತೆ, ಜೀವ ವಿಮೆ ಒದಗಿಸುವ ಹಾಗೂ ಖಾಯಂಗೊಳಿಸುವ ಕುರಿತು ನವಲಗುಂದ ತಹಶೀಲ್ದಾರ ಸುಧೀರ ಸಾವಕಾರ ಅವರಿಗೆ ಖಾಸಗಿ ಬೆಳೆ ಸಮೀಕ್ಷೆಗಾರರು ಮನವಿ ಸಲ್ಲಿಸಿದರು.
ನಾವು ಸುಮಾರು 7-8 ವರ್ಷಗಳಿಂದ ಬೆಳೆ ಸಮೀಕ್ಷೆಗಾರರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಸೇವೆ ಸಲ್ಲಿಸುತ್ತಿರುವಾಗ ಹಾವು ಚೇಳು ಕಚ್ಚಿರುತ್ತವೆ, ತೋಳಗಳು, ಹೆಚ್ಚೇನುಗಳು ದಾಳಿ ಮಾಡಿರುತ್ತವೆ. ನಾವು ಜೀವದ ಆಸೆ ಬಿಟ್ಟು ಶ್ರದ್ದೆಯಿಂದ ರೈತರ ಸೇವೆ ಮಾಡುತ್ತಿದ್ದೇವೆ ಸಮೀಕ್ಷೆ ಮಾಡುವಾಗ ಕೆಲವು ರೈತರು ನೀವು ಯಾರೆಂದು ಪ್ರಶ್ನೆ ಮಾಡುತ್ತಾರೆ. ಕೆಲಮೊಮ್ಮೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಅದರಿಂದ ನಮಗೇ ಶಾಖ್ ಹತ್ತಿ ಜೀವ ಹೋಗುವ ಸಂದರ್ಭವಿರುತ್ತದೆ. ಆದ್ದರಿಂದ ನಮಗೆ ದಿನಗೂಲಿ ಆಧಾರದ ಮೇಲೆ ದಿನಾಲು ಕೆಲಸ ನೀಡಬೇಕು ಹಾಗೂ ಜೀವ ವಿಮೆ ಒದಗಿಸಬೇಕು ಮತ್ತು ಎಲ್ಲಖಾಸಗಿ ನಿವಾಸಿ ಬೆಳೆ ಸಮೀಕ್ಷೆಗಾರರಿಗೆ ಬೇಡಿಕೆಗಳಾದ ಗುರುತಿನ ಚೀಟಿ, ರೇನ್ ಕೋಟ್, ಪವರ ಬ್ಯಾಂಕ, ಪಾರೇಸ್ಟ್ ಶೂಜ್, ವರ್ಷದಲ್ಲಿ 3 ಬಾರಿ ಮಾತ್ರ ಕೆಲಸ ನೀಡಲಾಗುತ್ತದೆ. ಅದನ್ನು ಖಾಯಂ ಗೋಳಿಸಿ ಪ್ರತಿ ತಿಂಗಳು 8 ರಿಂದ 15 ಸಾವಿರ ಗೌರವ ಧನ ನೀಡಬೇಕು. ಒಬ್ಬ ಪಿಆರ್‌ಗೆ 10 ಲಕ್ಷ ಜೀವ ವಿಮೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

