ಕುಂದಗೋಳ : ರೈತಾಪಿ ಜನರ ಬಹುದೊಡ್ಡ ಹಬ್ಬ ಸೀಗೆ ಹುಣ್ಣಿಮೆಗೆ ಭೂಮಿ ತಾಯಿಯ ಪೂಜೆ ಸಲ್ಲಿಸಲು ತರೆಳಿದ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಅಣ್ಣಯ್ಯ ನಂದಯ್ಯನವರ, ಮುಕ್ಕಣ್ಣ ಹಂಚಿನಾಳ ಗ್ರಾಮದಿಂದ ಸಂಪರ್ಕ ಕಳೆದುಕೊಂಡ ಬೇರೆ ಮಾರ್ಗದ ಮೂಲಕ ಊರು ತಲುಪಲು ಮುಂದಾಗಿದ್ದಾರೆ.
ಇತ್ತ ಹಳ್ಳ ತುಂಬಿ ರಭಸದಿಂದ ತುಂಬಿ ಹರಿಯುತ್ತಿರುವ ಕಾರಣ ತಮ್ಮ ಜಮೀನಿಗೆ ತೆರಳಲು ಮಾರ್ಗ ಇಲ್ಲದೆ ರೈತಾಪಿ ಜನ ಜಮೀನಿಗೆ ಪೂಜೆ ಸಲ್ಲಿಸುವ ಬದಲು ಹಳ್ಳದ ದಂಡೆಗೆ ನೀರಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಿ ಮನೆಗೆ ತೆರಳುವ ದೃಶ್ಯಗಳು ಕಂಡು ಬಂದವು.
ಕಳೆದ ಹಲವು ವರ್ಷಗಳಿಂದ ಸೊಟ್ಟ ಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಆಗದೆ ಇರುವುದು ರೈತಾಪಿ ಜನರನ್ನೂ ಈ ದುಸ್ಥಿತಿ ತಂದೊಡ್ಡಿದೆ ಎಂದು ರೈತ ಬಸವರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

