ಕೊಪ್ಪಳ: ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದ್ದ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಉದ್ಯಮಿ ಭಾಗ್ಯನಗರದ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕೂದಲೋದ್ಯಮಿಯಾಗಿ ಹೆಸರು ಮಾಡಿರುವ ಗುಪ್ತಾ ಅವರ ಹೆಸರು ಈ ಸ್ಥಾನಕ್ಕೆ ಹಿಂದೆಯೇ ಕೇಳಿಬಂದಿದ್ದರೂ ಈಗ ಅಧಿಕೃತವಾಗಿ ಘೋಷಣೆಯಾಗಿದೆ.
ಪರಿಶಿಷ್ಟ ಪಂಗಡದ ಮಾರ್ಕಂಡೇಶ್ವರ ಕಲ್ಲನವರ, ಲಿಂಗಾಯತ ಸಮುದಾಯದ ಚನ್ನಬಸಯ್ಯ ಚನ್ನವಡಿಯರ ಮಠ, ಮುಸ್ಲಿಂ ಸಮಾಜದ ಅಬ್ದುಲ್ ಲತೀಫ್ ಖತೀಬ್ ಮತ್ತು ಪರಿಶಿಷ್ಟ ಜಾತಿಯ ಕಾಳಮ್ಮ ಶಿವಶರಣ ಬಸವರಾಜ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ಸ್ಥಳೀಯ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಜವಾಬ್ದಾರಿ ನಿರ್ವಹಿಸುವೆ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದು ಶ್ರೀನಿವಾಸ ಗುಪ್ತಾ ಸಂತೋಷ ಹಂಚಿಕೊಂಡರು.
bigtvnews | Hubli Dharwad News | Kannada News | Karnataka News Hubli News | News In Hubli | Local news

