ರಾಯಚೂರು: ಜಿಲ್ಲೆಯಲ್ಲಿ ಮಾರುಕಟ್ಟೆಗೆ ಬರುವ ಮುಂಚೆಯೇ ಹತ್ತಿ ದರ ತೀವ್ರ ಕುಸಿತ ಕಂಡಿದ್ದು, ಇದರಿಂದ ರೈತರು ಕಂಗಾಲಾಗಿದ್ದಾರೆ. ಪ್ರಸಕ್ತ ವರ್ಷ ಸಕಾಲಕ್ಕೆ ಮಳೆ ಬಾರದೇ ಇರುವುದರಿಂದ ಮಳೆಯೂ ಬಂದಿಲ್ಲ. ಇಳುವರಿಯೂ ಬಂದಿಲ್ಲ. ಹತ್ತಿ ಮಾರುಕಟ್ಟೆಗೆ ಬರುವುದಕ್ಕಿಂತ ಮುಂಚೆಯೇ ದರ ಕುಸಿದಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.
ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬಾರದೆ ತಡವಾಗಿ ಮಳೆಯ ಅಭಾವದಿಂದ ಬೆಳೆ ಅಷ್ಟಕಷ್ಟೆ ಬಂದಿದೆ. ಈ ಹೊತ್ತಿನಲ್ಲಿ ಹತ್ತಿಯ ದರ ಕುಸಿದಿದೆ. ತುಂಗಭದ್ರಾ ಮತ್ತು ಕೃಷ್ಣಾ ನೀರಾವರಿ ಪ್ರದೇಶದಲ್ಲಿ ಹತ್ತಿ ಬೆಳೆದ ರೈತರು ಬೆಲೆ ಕುಸಿತದ ಬಿಸಿಗೆ ಭಯದ ಸೃಷ್ಟಿಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





