Breaking News

ಬಲಿಷ್ಠ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಿಡುವ ಮಟ್ಟಿಗೆ ದೇಶವನ್ನು ಬೆಳೆಸಿದ ಕೀರ್ತಿ ಎಪಿಜೆ ಅಬ್ದುಲ್ ಕಲಾಂ ಅವರದು

ನವಲಗುಂದ: ಬಲಿಷ್ಠ ರಾಷ್ಟ್ರಗಳ ಜತೆ ಭಾರತ ಪೈಪೋಟಿ ನಿಡುವ ಮಟ್ಟಿಗೆ ದೇಶವನ್ನು ಬೆಳೆಸಿದ ಕೀರ್ತಿ ಎಪಿಜೆ ಅಬ್ದುಲ್ ಕಲಾಂ ಅವರದು. ಇಂದಿನ ಯುವ ಪೀಳಿಗೆ ಅವರ ಆದರ್ಶ ಮತ್ತು ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಪಿಎಸ್‌ಐ ಜನಾರ್ಧನ ಭಟ್ರಳ್ಳಿ ಹೇಳಿದರು.

ಎಪಿಜೆ ಅಬ್ದುಲ್ ಕಲಾಂ ಅಭಿಮಾನಿ ಸಂಘದಿಂದ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನಡುವ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಪರಿಸರ ಪ್ರೇಮಿ ದಾವಲಸಾಬ ಅಣ್ಣಿಗೇರಿ ಹಾಗೂ ಭಟ್ರಳ್ಳಿ ಅವರನ್ನು ಸನ್ಮಾನಿಸಿ, ನಂತರ ಖಬರಸ್ಥಾನದಲ್ಲಿ 50 ಸಸಿಗಳನ್ನು ನೆಡಲಾಯಿತು.

ಸಂಘದ ಅಧ್ಯಕ್ಷ ರಿಯಾಜಅಹಮದ್ ನಾಶಿಪುಡಿ, ಹಿರಿಯರಾದ ಸೈಪುದ್ದೀನ ಅವರಾದಿ, ಜಬ್ಬಾರಸಾಬ ಧಾರವಾಡ, ಆಜಾದ ನಾಶಿಪುಡಿ, ಬಾಬುಸಾಬ ಮಕಾಂದಾರ, ಕುತುಬೂಸಾಬ ಒಂಟಿ, ಜಾಕಿರ ಧಾರವಾಡ, ಖಾಜಾ ನಿಗದಿ ಇದ್ದರು.

Share News

About Shaikh BigTv

Check Also

ಅವಳಿ ನಗರದಲ್ಲಿ ಗಾಂಜಾ ಪೆಡ್ಲರ್‌ಗಳ ಬೇಟೆ; 6 ಮಂದಿ ಅಂದರ್, 491 ಗ್ರಾಂ ಗಾಂಜಾ ಜಪ್ತಿ!

ಹುಬ್ಬಳ್ಳಿ–ಧಾರವಾಡದಲ್ಲಿ ಗಾಂಜಾ ಪೆಡ್ಲರ್‌ಗಳಿಗೆ ಖಾಕಿ ಸಿಂಹಸ್ವಪ್ನ; ಎರಡು ಕಡೆ ಏಕಕಾಲಕ್ಕೆ ಪೊಲೀಸ್ ಬೇಟೆ, 6 ಮಂದಿ ಅಂದರ್.. ಗಾಂಜಾ ದಂಧೆಗೆ …

Leave a Reply

Your email address will not be published. Required fields are marked *