Breaking News

ಭಾರಿ ಮಳೆಯಿಂದಾಗಿ ಹಾನಿಯಾದ ಮನೆ, ಬೆಳೆಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಕೆ

ಕುಂದಗೋಳ : ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ರೈತಾಪಿ ಜನರ ಬೆಳೆಗಳನ್ನು ಅಕ್ಷರಶಃ ನಾಶ ಮಾಡಿದೆ. ಈ ಕಾರಣ ರೈತರಿಗೆ ಪ್ರತಿ ಹೆಕ್ಟೇ‌ರ್’ಗೆ 50 ಸಾವಿರ ರೂಪಾಯಿ ಪರಿಹಾರ ಮನೆ ಬಿದ್ದವರಿಗೆ 5 ಲಕ್ಷ ಪರಿಹಾರ ಕೊಡಬೇಕು ಎಂದು ಜೆಡಿಎಸ್‌ ಪಕ್ಷದ ಮುಖಂಡರು ತಹಶೀಲ್ದಾ‌ರ್ ರಾಜು ಮಾವರಕರ ಅವರಿಗೆ ಸಲ್ಲಿಸಿದರು.

ಈಗಾಗಲೇ ರಾಜ್ಯಾದ್ಯಂತ ಕುಂದಗೋಳ ತಾಲೂಕಿನಾದ್ಯಂತ ಬೆಳೆ ಹಾನಿಯಾಗಿರುವ ಸಂದರ್ಭದಲ್ಲಿ ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ತುಂಬಲು ನೋಟಿಸ್‌ ನೀಡುತ್ತಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ರೈತರನ್ನೂ ಕಾಪಾಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಅತಿವೃಷ್ಟಿ ಕಾರಣ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಧನ ಸಿಗಬೇಕು ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಶಂಕರಗೌಡ ದೊಡ್ಡಮನಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಿ.ಬಿ.ಗಂಗಾಧರಮಠ, ಗುರುರಾಜ ಹಣಸಿಮರದ, ಮಹಾಬಳೇಶ ಮಾಸನಕಟ್ಟಿ, ಅಲ್ಲಿ ಸಂದಿಮನಿ, ಮಲ್ಲಿಕಾರ್ಜುನ ತೆಂಬದಮನಿ, ನಿರಂಜನಯ್ಯ ಮಣಕಟ್ಟಿಮಠ, ದಾದಾಪೀರ್‌ ರಾಟಿಮನಿ, ವಿನಾಯಕ ಗಾಡಿ ವಡ್ಡರ ಉಪಸ್ಥಿತರಿದ್ದರು.

Share News

About Shaikh BigTv

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *