Breaking News

ಸರ್ಕಾರಿ ಶಾಲೆಯ ಶಾಲಾ ಕೊಠಡಿ ಆವರಣದಲ್ಲಿ ನಿಂತ ನೀರು

ನವಲಗುಂದ: ಸತತ ಮಳೆಯಿಂದಾಗಿ ತಾಲೂಕಿನ ತಿರ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲಾ ಕೊಠಡಿ ಹಾಗೂ ಆವರಣದಲ್ಲಿ ನೀರು ನಿಂತುಕೊಂಡಿದ್ದು, ಮಕ್ಕಳು ಶಾಲೆಗೆ ಹೋಗಲು, ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.

ಶಾಲೆಗೆ ದಸರಾ ರಜೆ ಇರುವ ಕಾರಣಕ್ಕೆ ಅದೃಷ್ಟಾವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಎರಡು ದಿನದ ಹಿಂದೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಗ್ರಾಮಕ್ಕೆ ಭೇಟಿ ನೀಡಿದ್ದರೂ ಶಾಲೆಯತ್ತ ತಿರುಗಿಯೂ ನೋಡದೇ ಇರುವುದು ಶೋಚನೀಯ. ಭೂಮಿ ಮಟ್ಟದಲ್ಲಿ ಶಾಲಾ ಕಟ್ಟಡವಿರುವುದರಿಂದ ಮಕ್ಕಳ ತರಗತಿ ನಡೆಯುವ ಕೊಠಡಿ ಸಂಪೂರ್ಣ ನೀರು ತುಂಬಿದೆ. ಅಲ್ಲದೇ, ಶಾಲೆಯ ಸುತ್ತಲೂ ಯಾವುದೇ ರಕ್ಷಣಾ ಗೋಡೆ ನಿರ್ಮಿಸಿಲ್ಲ. ಹೀಗಾಗಿ ಮಳೆ ಬಂದರೆ ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಕೊಠಡಿ ಒಳಗೆ ಬರುತ್ತವೆ ಎಂಬುದು ವಿದ್ಯಾರ್ಥಿಗಳ ಅಳಲು.

ಪ್ರತಿ ವರ್ಷ ಮಳೆಗಾಲದಲ್ಲಿ ಶಾಲೆಯ ಆವರಣದಲ್ಲಿ ಅವ್ಯವ್ಯಸ್ಥೆ ಸೃಷ್ಟಿಯಾಗುತ್ತದೆ. ಮೈದಾನದಲ್ಲಿ ನಿಂತ ನೀರು ಒಂದು ವಾರ ಇರುತ್ತದೆ. ಇದರಿಂದ ಕೆಟ್ಟ ವಾಸನೆಯಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತದೆ. ಶಾಲಾ ಕೊಠಡಿಗಳಲ್ಲೂ ಮತ್ತು ಶಿಕ್ಷಕರ ಕೊಠಡಿಗಳಲ್ಲೂ ಮಳೆ ನೀರು ನಿಂತು ಪಾಠ ಪ್ರವಚನ ಮತ್ತು ಪತ್ಯೇತರ ಚಟುವಟಿಕೆಗಳು ಕುಂಠಿತಗೊಂಡಿವೆ ಎನ್ನುತ್ತಾರೆ ಗ್ರಾಮಸ್ಥರು.

Share News

About Shaikh BigTv

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *