ಕುಂದಗೋಳ: ತಾಲೂಕು ಆಡಳಿತದ ವತಿಯಿಂದ ಇದೇ ಆಗಸ್ಟ್ 26 ರಂದು ಸೋಮವಾರ ತಾಲೂಕು ದಂಡಾಧಿಕಾರಿಗಳ ಸಭಾ ಭವನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪೂಜೆ, ಸ್ವಾಗತ ಹಾಗೂ ಪ್ರಾಸ್ತಾವಿಕ, ಉದ್ಘಾಟನೆ, ಉದ್ಘಾಟನಾ ಭಾಷಣ, ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಂದ ಕೃಷ್ಣನ ವೇಷ ಭೂಷಣ ಸ್ಪರ್ಧೆ, ಉಪನ್ಯಾಸ, ಮುಖ್ಯ ಅತಿಥಿಗಳ ಭಾಷಣ, ಅಧ್ಯಕ್ಷೀಯ ಭಾಷಣ ಮತ್ತು ವಂದನಾರ್ಪಣೆ ನಡೆಯಲಿದೆ.
ಈ ಕಾರ್ಯಕ್ರಮವು ತಹಶೀಲ್ದಾರ್ ರಾಜು ಮಾವರಕರ ನೇತೃತ್ವದಲ್ಲಿ ನೆರವೇರಲಿದ್ದು, ಶಾಸಕ ಎಂ.ಆರ್.ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

