Breaking News

ವಾಹನದ ಟೈಯರ್ ಸ್ಫೋಟ: ಓರ್ವ ಸಾವು

ಕುಂದಗೋಳ : ಬಸಾಪುರ ಗ್ರಾಮದ ಹತ್ತಿರ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನದ ಟೈಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒರ್ವ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.

ವಡ್ಡಿಕೊಪ್ಪ ಗ್ರಾಮದ ಸುರೇಶ ಬಸಪ್ಪ ಮ್ಯಾಗೇರಿ(45) ಮೃತಪಟ್ಟ ವ್ಯಕ್ತಿ . ಸವಣೂರ ತಾಲೂಕಿನ ವಡ್ಡಿಕೊಪ್ಪ ಗ್ರಾಮದಿಂದ 12 ಜನ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಕುಂದಗೋಳ ತಾಲೂಕಿನ ಸಂಶಿ ಹತ್ತಿರ ಶೇಂಗಾ ಬಣವಿ ಒಟ್ಟಲು ಹೊರಟ ಟಾಟಾ ಏಸ್ ವಾಹನ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.ಅಪಘಾತದ ವೇಳೆ ಗಾಯಗೊಂಡವರನ್ನು ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರ ಹಾಗೂ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Share News

About Shaikh BigTv

Check Also

ಟಗರು ಕಾಳಗದ ವೇಳೆ ಜಗಳ: ಚಾಕು ಇರಿತ

ಹೊಳೆಹೊನ್ನೂರು: ಸಮೀಪದ ಆನವೇರಿಯಲ್ಲಿ ಬುಧವಾರ ಟಗರು ಕಾಳಗ ವೀಕ್ಷಿಸಲು ಬಂದಿದ್ದ ಯುವಕರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಸುನೀಲ್ …

Leave a Reply

Your email address will not be published. Required fields are marked *