Breaking News

ಬಸವರಾಜ ಮುತ್ತಗಿಗೆ ಸಿಬಿಐ ಭದ್ರತೆ

ಧಾರವಾಡ: ಬಿಜೆಪಿ ಮುಖಂಡ ಯೋಗೀಶಗೌಡ ಗೌಡರ ಹತ್ಯೆ ಪ್ರಕರಣದ ಆರೋಪಿಯಾಗಿರುವ ಬಸವರಾಜ ಮುತ್ತಗಿಗೆ ಸಿಬಿಐ ಭದ್ರತೆ ಒದಗಿಸಿದೆ. ನಾಳೆ ಸಿಐಎಸ್‌ಎಫ್‌ ಅಥವಾ ಸಿಆರ್‌ಪಿಎಫ್ ಪೊಲೀಸರಿಂದ ಮುತ್ತಗಿಗೆ ಭದ್ರತೆ ನೀಡಲಾಗುತ್ತಿದೆ.

ಯೋಗೀಶಗೌಡರ ಹತ್ಯೆ ಪ್ರಕರಣದ ಎ1 ಆರೋಪಿಯಾಗಿರುವ ಬಸವರಾಜ ಮುತ್ತಗಿ 17ನೇ ಎಸಿಎಂಎಂ ಕೋರ್ಟ್‌ಲ್ಲಿ 164 (1) ಅಡಿ ತಪ್ರೊಪ್ಪಿಗೆ . 22 3060 ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲು ಸಿಬಿಐ ಸಮ್ಮತಿ ನೀಡಿದೆ. ಆದರೆ, ತಮಗೆ ಜೀವ ಬೆದರಿಕೆ ಇದ್ದು ಭದ್ರತೆ ನೀಡುವಂತೆಯೂ ಮುತ್ತಗಿ ಮನವಿ ಮಾಡಿದ್ದರು.

ಮುತ್ತಗಿಗೆ ಭದ್ರತೆ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿರುವ ಮುತ್ತಗಿ ಮನೆಗೆ ಸಿಬಿಐ ಅಧಿಕಾರಿಗಳು ಭದ್ರತೆ ನೀಡಿದ್ದಾರೆ. ನಾಳೆ ಸಿಆರ್‌ಪಿಎಫ್ ಅಥವಾ ಸಿಐಎಸ್‌ಎಫ್ ಪೊಲೀಸರಿಂದಲೂ ಮುತ್ತಗಿಗೆ ಭದ್ರತೆ ನೀಡಲಾಗುತ್ತಿದೆ.

ತಾನು ತಪ್ರೊಪ್ಪಿಗೆ ಹೇಳಿಕೆ ನೀಡಿದ್ದರಿಂದ ತನಗೆ ಜೀವ ಭಯವಿದೆ ಎಂದು ನ್ಯಾಯಾಲಯದ ಮುಂದೆ ಮುತ್ತಗಿ ಹೇಳಿದ್ದಾರೆ. ಅಲ್ಲದೇ ಕ್ಷಮಾದಾನ ನೀಡುವಂತೆಯೂ ಮುತ್ತಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಯೋಗೀಶಗೌಡ ಹತ್ಯೆಯ ಸಾಕ್ಷಿ ನಾಶ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಕೂಡ ಈಗಾಗಲೇ ಬಂಧಿತರಾಗಿದ್ದರು. ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ಅವರಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧವಿದೆ.

Share News

About Shaikh BigTv

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *