Breaking News

ಯುವಕನನ್ನು ಅಪಹರಿಸಿ ಹಲ್ಲೆ

ಕಾಸರಗೋಡು: ಕಾಂಞಂಗಾಡ್‌ ಕೊಳವಯಲ್‌ ಟಿ.ಕೆ.ಹೌಸ್‌ನ ಟಿ.ಎ.ಸಹದಿ(37) ಅವರನ್ನು ಕಾರಿನಲ್ಲಿ ಅಪಹರಿಸಿ ಕಾಳುಮೆಣಸು ಸ್ಪ್ರೆ ಮಾಡಿದ ಬಳಿಕ ಹಲ್ಲೆಗೈದು ನಗ್ನ ಫೋಟೋ ತೆಗೆದು ಸೋಶ್ಯಲ್‌ ಮೀಡಿಯಾದಲ್ಲಿ ಪ್ರಚಾರಪಡಿಸುವುದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೊಳವಯಲ್‌ ನಿವಾಸಿ ಅಫ್ಸಲ್‌ ಹಾಗೂ ಗುರುತು ಹಚ್ಚಬಹುದಾದ ಇತರ ನಾಲ್ವರ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ. ರಾತ್ರಿ ಇಕ್ಬಾಲ್‌ ಜಂಕ್ಷನ್‌ನಿಂದ ಅಪಹರಿಸಿ ಉಪ್ಪಳಕ್ಕೆ ಕರೆದೊಯ್ದು ಈ ಕೃತ್ಯ ಎಸಗಲಾಗಿದೆ. ಘಟನೆ ನಡೆದಿರುವುದು ಮಂಜೇಶ್ವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಆಗಿರುವುದರಿಂದ ಅವರಿಗೆ ಹಸ್ತಾಂತರಿಸಲಾಗುವುದೆಂದು ಹೊಸದುರ್ಗ ಪೊಲೀಸರು ತಿಳಿಸಿದ್ದಾರೆ.

Share News

About BigTv News

Check Also

ಸಿಲಿಂಡರ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಕಾರ್ಮಿಕರ ಶೆಡ್‌ಗಳು ಭಸ್ಮ!

ಕಲಬುರಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುಲ್ಬರ್ಗಾ ಸಿಮೆಂಟ್ ಕಾರ್ಖಾನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಅಗ್ನಿ …

Leave a Reply

Your email address will not be published. Required fields are marked *