Breaking News

ಬೆಳೆ ಪರಿಹಾರ ಮತ್ತು ಬೆಳೆ ಸಾಲಮನ್ನಾ ಮಾಡುವಂತೆ ಮನವಿ‌ ಸಲ್ಲಿಕೆ

ನವಲಗುಂದ: ವಿಧಾನಸಭಾ ಕ್ಷೇತ್ರದದಲ್ಲಿ ವಾಡಿಕೆಗಿಂತ ಅತೀ ಹೆಚ್ಚು ಮಳೆ ಸುರಿದಿದ್ದರಿಂದ ರಸ್ತೆ, ಸೇತುವೆ ಹಾಳಾಗಿವೆ ಹಾಗೂ ಬೆಳೆ ಪರಿಹಾರ ಮತ್ತು ಬೆಳೆ ಸಾಲಮನ್ನಾ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ವತಿಯಿಂದ ಆಗ್ರಹಿಸಿ ತಹಸೀಲ್ದಾರ ಮುಖಾಂತರ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.

ಈ ವೇಳೆಯಲ್ಲಿ ಕರವೇ ನವಲಗುಂದ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸಿರಾಜುದ್ದೀನ್ ಧಾರವಾಡ ಮಾತನಾಡಿ, ನಗರ ಹಾಗೂ ಗ್ರಾಮಗಳಲ್ಲಿ ಅತೀಯಾಗಿ ಮಳೆಯಾಗಿದ್ದರಿಂದ ಮನೆಗಳು ನೆಲಕಚ್ಚಿವೆ, ಜಮೀನುಗಳಲ್ಲಿ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳಗಳಲ್ಲಿನ ಪ್ರವಾಹದಿಂದ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆಗಳನ್ನು ನಾಶವಾಗಿವೆ, ಆದ್ದರಿಂದ ಕೂಡಲೇ ಸರ್ಕಾರ ಸಂಪೂರ್ಣ ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ ಬೆಳೆ ಪರಿಹಾರ ಹಾಗೂ ಮನೆ ಬಿದ್ದವರಿಗೆ ಪರಿಹಾರ ನೀಡಬೇಕು ಅಲ್ಲದೇ ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಮತ್ತು ತಾಲೂಕಿನಾದ್ಯಂತ ಅತೀಯಾದ ಮಳೆಯಿಂದ ರಸ್ತೆ ಮತ್ತು ಸೇತುವೆಗಳು ಹಾಳಾಗಿದ್ದು, ತಕ್ಷಣವೇ ಸರಿಪಡಿಸಲು ಕ್ರಮ ಕೈಗೊಂಡು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ, ಇಲ್ಲವಾದಲ್ಲಿ ನಮ್ಮ ಸಂಘಟನೆ ವತಿಯಿಂದ ರಾಜ್ಯಾದ್ಯಂತ ಉಗ್ರವಾದ ಹೋರಾಟ ಕೈಗೊಳ್ಳುವುದು ಅನಿವಾರ್ಯ ಎಂದರು.

ಈ ವೇಳೆ ರಿಯಾಜ್ ನಾಶಿಪುಡಿ, ಇಮ್ಮಿಯಾಜ ಜಮಖಾನ, ಮಮದ ಮಟಿಗಾರ, ರಾಜು ಜಾಲಿಹಾಳ‌ ಇತರರು ಭಾಗಿಯಾಗಿದ್ದರು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *