ಬಳ್ಳಾರಿ: ತುಂಗಭದ್ರಾ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ಗಂಗಾವತಿ ಕಂಪ್ಲಿ ಸೇತುವೆ ಮುಳುಗಡೆ ಹಂತ ತಲುಪಿದೆ.
ಸೇತುವೆ ಮೇಲೆ ವಾಹನ ಸವಾರರಿಗೆ ನಿರ್ಭಂದ ಏರಲಾಗಿದ್ದು, ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಪ್ರವೇಶ ನಿರ್ಭಂದಿಸಿದ್ದಾರೆ.
ಕಂಪ್ಲಿ ತಾಲೂಕಿನ ಕಂಪ್ಲಿ ಕೋಟೆ ಬಳಿಯ ಕಂಪ್ಲಿ ಸೇತುವೆ ಇದಾಗಿದ್ದು, ಈ ವರ್ಷ ಐದನೆ ಬಾರಿಗೆ ಸೇತುವೆ ಮೇಲೆ ಸಂಚಾರ ನಿರ್ಭಂದ ವಿಧಿಸಲಾಗಿದೆ.
ನದಿಗೆ ಹೆಚ್ಚಿನ ಪ್ರಮಾಣದ ನೀರು ಇದ್ದು, ಪ್ರತಿ ಬಾರಿ ಇದೇ ರೀತಿ ಸೇತುವೆ ಮುಳುಗಡೆಯಾಗಲಿದೆ. ಸೇತುವೆ ಮೇಲ್ದರ್ಜೆಗೆ ಏರಿಸುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಸೇತುವೆ ಮುಳುಗಡೆಯಾದ್ರೆ 25 ಕಿ ಮಿ ಸುತ್ತುವರೆದು ಕಂಪ್ಲಿ ಗೆ ಜನ ತೆರಳಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





