ನವಲಗುಂದ : ಅತಿವೃಷ್ಟಿಯಿಂದ ಇತ್ತೀಚಿಗೆ ತಾಲೂಕಿನ ಹನಸಿ ಗ್ರಾಮದದಲ್ಲಿ ಮನೆಬಿದ್ದ ಪರಿಣಾಮ ಸುಮಂಗಲಾ ಮರಿಗೌಡ ಪಾಟೀಲ(54) ಎಂಬುವರು ತೀವ್ರ ಗಾಯಗೊಂಡ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು ನಂತರ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಮೃತರ ಮನೆಗೆ ಇಂದು ತಾಲೂಕಾ ಕಾಂಗ್ರೆಸ್ ಕಮಿಟಿಯವರು ಸಾಂತ್ವನ ಹೇಳಿ ತಮ್ಮ ನೋವು ಹಾಗೂ ಕಷ್ಟಕ್ಕೆ ಸರಕಾರ ಪರಿಹಾರ ನೀಡಲು ಬದ್ದವಾಗಿದೆ. ಕ್ಷೇತ್ರದ ಶಾಸಕ ಎನ್.ಎಚ್.ಕೋನರಡ್ಡಿ ಅವರ ಜೊತೆಗೆ ಚರ್ಚಿ ಮಾಡಿ ಸರಕಾರದಿಂದ ಬರುವಂತಹ ಎಲ್ಲ ಸೌಲಭ್ಯಗಳನ್ನು ಮೃತರ ಕುಟುಂಬಕ್ಕೆ ತೊರಗಿಸುವಂತಹ ಕೆಲಸವನ್ನು ನಾವು ಮಾಡುತ್ತೇವೆಂದು ಭರವಸೆ ನೀಡಿದರು.
ನವಲಗುಂದ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡರ, ಜಿಲ್ಲಾ ಕೆ.ಡಿ.ಪಿ ಸದಸ್ಯರಾದ ಆರ್.ಎಚ್.ಕೋನರಡ್ಡಿ, ಮಲಪ್ರಭಾ ನೀರು ಬಳಕೆದಾರರ ಮಹಾಮಂಡಳದ ಅಧ್ಯಕ್ಷ ಸದುಗೌಡ ಪಾಟೀಲ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಈ ಒಂದು ಘಟನೆಯಿಂದ ನಮಗೂ ಸಹ ನೋವುಂಟಾಗಿದೆ. ಇಂತಹ ಘಟನೆ ಆಗಬಾರದು ಮೃತರ ಕುಟುಂಬಕ್ಕೆ ದೇವರು ದು:ಖ ಭರಸುವಂತಹ ಶಕ್ತಿ ನೀಡಲಿಂದು ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಪ್ಪ ನಾಯ್ಕರ, ಪ್ರಭು ಬಾವಿಕಟ್ಟಿ, ರುದ್ರಗೌಡ ಪಾಟೀಲ, ಮಲ್ಲಿಕಾರ್ಜುನ ಗುಜ್ಜಳ, ಮಲನಗೌಡ ಪಾಟೀಲ. ಶಿವಾನಂದ ಭೂಮಣ ವರ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

