Breaking News

ಗೋಕರ್ಣದಲ್ಲಿ ಹೋಂಸ್ಟೇ ನಿಯಮ ಉಲ್ಲಂಘನೆ: ವಿದೇಶಿ ಪ್ರವಾಸಿಗರ ಮಾಹಿತಿ ನೀಡದ ಮಾಲೀಕರ ವಿರುದ್ಧ ಪ್ರಕರಣ

ಕಾರವಾರ: ಜಿಲ್ಲೆಯ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ತಂಗಿರುವ ಮಾಹಿತಿ ಪೊಲೀಸ್ ಇಲಾಖೆಗೆ ನೀಡದೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಭೀಮಕೊಂಡ ಪ್ರದೇಶದಲ್ಲಿರುವ ವೈಲ್ಡ್ ವಿಲೇಜ್ ಹೋಮ್ ಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಹೋಂಸ್ಟೇನಲ್ಲಿ ಅರ್ಜೆಂಟೈನಾದ ಪ್ರವಾಸಿಗ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಹಾಗೂ ಅವರ ತಾಯಿ ಕಳೆದ ಎರಡು ದಿನಗಳಿಂದ ತಂಗಿದ್ದರು. ವಿದೇಶಿ ಪ್ರಜೆಗಳು ತಂಗಿದ ಬಗ್ಗೆ ‘ಸಿ’ ಫಾರ್ಮ್ ಭರ್ತಿ ಮಾಡಿ ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸುವುದು ಕಡ್ಡಾಯವಾಗಿದ್ದರೂ, ಈ ಮಾಹಿತಿ ನೀಡದಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಲಸೆ ಕಾನೂನುಗಳ ಅಡಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಬಿ.ಎಂ. ಅನಿಲ್ ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *