Breaking News

ಸಾಲ ತಾಳಲಾರದೆ ವ್ಯಕ್ತಿ ಆತ್ಮಹತ್ಯೆ

ಧಾರವಾಡ: ಖಾಸಗಿ ವ್ಯಕ್ತಿಯಿಂದ ಸಾಲ ಪಡೆದುಕೊಂಡಿದ್ದ ಯುವಕನೋರ್ವ ಆತನ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಧಾರವಾಡದ ಚರಂತಿಮಠ ಗಾರ್ಡನ್ ನಿವಾಸಿ ಮಂಜುನಾಥ ಕಟಗೆಣ್ಣವರ (32) ಎಂಬಾತನೇ ಧಾರವಾಡದ ಕೆಲಗೇರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವನು.

ಮಂಜುನಾಥ ಖಾಸಗಿ ವ್ಯಕ್ತಿ ಕಡೆ ಸಾಲ ಪಡೆದುಕೊಂಡಿದ್ದ. ಸಾಲಕ್ಕೆ ಬಡ್ಡಿ ಕೊಡುವಂತೆ ಕಿರುಕುಳ ಸಹ ನೀಡುತ್ತಿದ್ದ. ಅಷ್ಟೇ ಅಲ್ಲದೇ ಆ ಸಾಲಕ್ಕೆ ಮಂಜುನಾಥನ ಮನೆಯನ್ನು ಆ ಖಾಸಗಿ ವ್ಯಕ್ತಿ ಸಂಚಕಾರ ನೋಂದಣಿ ಸಹ ಮಾಡಿಸಿಕೊಂಡಿದ್ದ. ಇದರಿಂದ ಮನನೊಂದ ಮಂಜುನಾಥ ಧಾರವಾಡದ ಕೆಲಗೇರಿ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಧಾರವಾಡದ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *