Breaking News

ವಾಹನ ಮತ್ತು ಬೈಕ್‌ ನಡುವೆ ಅಪಘಾತ : ಸವಾರ ಸಾವು

ಕುಂದಗೋಳ: ಟಾಟಾ ಏಸ್ ವಾಹನ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.

ಕುಂದಗೋಳ ಕಡೆಯಿಂದ ಬೆನಕನಹಳ್ಳಿ ಮಾರ್ಗವಾಗಿ ವೇಗವಾಗಿ ಟಾಟಾ ಏಸ್ ವಾಹನ ನಡೆಸಿಕೊಂಡು ಬಂದ ವಾಹನ ಚಾಲಕ ಕುಂದಗೋಳ ಸೋನಾರ್ ಪ್ಲಾಟ್ ಕಡೆಯಿಂದ ಮೂರಂಗಡಿ ಕೂಟ್ ಮಾರ್ಗವಾಗಿ ಹೊರಟಿದ್ದ ಬೈಕ್ ಡಿಕ್ಕಿ ಪಡಿಸಿ ಅಪಘಾತ ಮಾಡಿದ್ದಾನೆ.

ಅಪಘಾತದ ವೇಳೆ ಅಕ್ಟೋಬರ್ 14 ರಂದು ಗಾಯಗೊಂಡ ಬೈಕ್‌ ಸವಾರನನ್ನು ಹೆಚ್ಚಿನ ಚಿಕಿತ್ಸೆಗಾಗಿ ಘಟನೆ ನಡೆದ ದಿನವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅಕ್ಟೋಬ‌ರ್ 20 ರಂದು ಅಪಘಾತಕ್ಕೆ ಒಳಗಾಗಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.

ಈ ಘಟನೆ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *