ಮಾಸ್ಕೋ: ಪ್ರಪಂಚದ ಪ್ರತಿಯೊಂದು ದೇಶಕ್ಕೂ ಭಾರತ ಬೇಕೆ ಬೇಕು, ಭಾರತ ಇಲ್ಲದೆ ಬಹುಶಃ ಜಗತ್ತು ಬದುಕಿ ಉಳಿಯಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಔಷಧ, ಆಹಾರ, ಅದಿರುಗಳು ಹೀಗೆ, ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧ ವಸ್ತುಗಳ ತನಕ ಭಾರತ ಎಲ್ಲವನ್ನೂ ಜಗತ್ತಿಗೆ ನೀಡುತ್ತದೆ.
ಇದೇ ಕಾರಣಕ್ಕೆ ಜಗತ್ತಿನ ಪ್ರತಿಯೊಂದು ದೇಶ ಕೂಡ ಭಾರತದ ಜೊತೆಗೆ ವ್ಯಾಪಾರ ಸಂಬಂಧ ಇಟ್ಟುಕೊಂಡು ಬಂದಿವೆ. ಹೀಗಿದ್ದಾಗ ಬ್ರಿಕ್ಸ್ ಶೃಂಗಸಭೆ ಭಾರತದ ಬಲವನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯರಿಗೆ ದೊಡ್ಡ ಸಂದೇಶ ರವಾನೆ ಮಾಡಿದೆ.
ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಭಾರತದ ಅವಶ್ಯಕತೆ ತುಂಬಾನೇ ಹೆಚ್ಚಾಗಿದೆ. ಯಾಕೆ ಅಂದ್ರೆ ಒಂದು ಕಡೆ ರಷ್ಯಾ ಮೂಲಕ ಬರುತ್ತಿದ್ದ ತೈಲ & ಗ್ಯಾಸ್ ಖರೀದಿಯನ್ನು ಯುರೋಪ್ ಈಗ ಬ್ಯಾನ್ ಮಾಡಿದೆ. ಹಾಗೇ ರಷ್ಯಾ ಮೂಲದಿಂದ ಬರುತ್ತಿದ್ದ ವಸ್ತುಗಳ ಮೇಲೆ ಕೂಡ ನಿಷೇಧ ಹೇರಿ, ದೊಡ್ಡ ಇಕ್ಕಟ್ಟಿಗೆ ಸಿಲುಕಿದ್ದಾರೆ ಪಾಶ್ಚಿಮಾತ್ಯರು ಹೀಗಿದ್ದಾಗ ಭಾರತ ಆ ತೈಲವನ್ನು ಖರೀದಿ ಮಾಡಿ ಮತ್ತೆ ಅದನ್ನೇ ಯುರೋಪ್ ದೇಶಗಳಿಗೆ ಮಾರುತ್ತಿದೆ ಎಂಬ ಮಾತು ಇದೆ. ಹೀಗಿದ್ದಾಗ ರಷ್ಯಾ ದೇಶಕ್ಕೆ ಭಾರತದ ಸ್ನೇಹ ಅನಿವಾರ್ಯ, ಹಾಗೇ ಭಾರತದ ನಂಬಿಕೆಯ ಗೆಳೆಯ ರಷ್ಯಾ ಆಗಿದೆ ಹೀಗೆ ಎರಡು ದೇಶಗಳ ಮಧ್ಯೆ ಅತ್ಯುತ್ತಮ ಸ್ನೇಹ ಇದ್ದಾಗಲೇ ಬ್ರಿಕ್ಸ್ ಶೃಂಗಸಭೆ ಮತ್ತೊಂದು ಇತಿಹಾಸ ನಿರ್ಮಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

