Breaking News

ರಷ್ಯಾ

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ ಮೂರು ಸಾವು.

ಮಾಸ್ಕೋ ನಗರದ ಹೊರವಲಯದಲ್ಲಿರುವ ಅಪಾರ್ಟ್ಮೆಂಟ್ ಗಳನ್ನು ಗುರಿಯಾಗಿಸಿ ಮಂಗಳವಾರ ಉಕ್ರಿನ್ ಭಾರೀ ಸಂಖ್ಯೆಗಳ ಡ್ರೋನ್ ಗಳಿಂದ ದಾಳಿ ಮಾಡಿದ್ದು ಮೂವರು ಮೃತಪಟ್ಟಿದ್ದಾರೆ. ಮಸ್ಕೋ ಸುತ್ತಮುತ್ತಲಿ ಪ್ರದೇಶದಲ್ಲಿ 337 ಡ್ರೋನ್ ಗಳನ್ನು ಹೊಡೆದುರುಳಿಸಿದಾಗಿ ರಷ್ಯಾ ಸಹ ಒಪ್ಪಿಕೊಂಡಿದೆ. ರಷ್ಯಾ ಸೇನೆಯು ಸಹ ವಕ್ರೀಂ ಮೇಲೆ ಕ್ಷಿಪಣಿ,ಡ್ರೋನ್ ಹಾಗೂ ಬೋಂಬ ದಾಳಿ ನಡೆಸಿದ್ದು ನಾಲ್ವರು ಗಾಯಗೊಂಡಿದ್ದಾರೆ. ನೂರು ಚದರ ಕಿಲೋ ಮೀಟರ್ ಪ್ರದೇಶ ಹಾಗೂ 12 ವಸಹಾತುಗಳನ್ನು ರಷ್ಯಾ ಉಕ್ರಿನಿಂದ ಒಳಪಡಿಸಿಕೊಂಡಿದೆ.

Read More »

ಭಾರತದ ಬಲವನ್ನು ಮತ್ತಷ್ಟು ಹೆಚ್ಚು ಮಾಡುವ ಜೊತೆಗೆ ಪಾಶ್ಚಿಮಾತ್ಯರಿಗೆ ದೊಡ್ಡ ಸಂದೇಶ ರವಾನಿಸಿದ ಬ್ರಿಕ್ಸ್ ಶೃಂಗಸಭೆ

ಮಾಸ್ಕೋ: ಪ್ರಪಂಚದ ಪ್ರತಿಯೊಂದು ದೇಶಕ್ಕೂ ಭಾರತ ಬೇಕೆ ಬೇಕು, ಭಾರತ ಇಲ್ಲದೆ ಬಹುಶಃ ಜಗತ್ತು ಬದುಕಿ ಉಳಿಯಲು ಸಾಧ್ಯವೇ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಔಷಧ, ಆಹಾರ, ಅದಿರುಗಳು ಹೀಗೆ, ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧ ವಸ್ತುಗಳ ತನಕ ಭಾರತ ಎಲ್ಲವನ್ನೂ ಜಗತ್ತಿಗೆ ನೀಡುತ್ತದೆ. ಇದೇ ಕಾರಣಕ್ಕೆ ಜಗತ್ತಿನ ಪ್ರತಿಯೊಂದು ದೇಶ ಕೂಡ ಭಾರತದ ಜೊತೆಗೆ ವ್ಯಾಪಾರ ಸಂಬಂಧ ಇಟ್ಟುಕೊಂಡು ಬಂದಿವೆ. ಹೀಗಿದ್ದಾಗ ಬ್ರಿಕ್ಸ್ ಶೃಂಗಸಭೆ ಭಾರತದ ಬಲವನ್ನು ಮತ್ತಷ್ಟು …

Read More »

ಬ್ರಿಕ್ಸ್ ನ ಸದಸ್ಯ ರಾಷ್ಟ್ರಗಳು ಶಾಂತಿ ಕಾಪಾಡಬೇಕು, ಯುದ್ಧ ಬೆಂಬಲಿಸಬಾರದು: ಪ್ರಧಾನಿ ಮೋದಿ

ಮಾಸ್ಕೋ: ರಷ್ಯಾ ಹಾಗೂ ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ರಷ್ಯಾದ ಕಜಾನ್‌ನಲ್ಲಿ ನಡೆಯುತ್ತಿರುವ 16 ನೇ ಶೃಂಗಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಸಭೆ ಆಯೋಜನೆ ಮಾಡಿದ ರಷ್ಯಾದ ಅಧ್ಯಕ್ಷ ಪುಟಿನ್‌ಗೆ ಅಭಿನಂದನೆ ತಿಳಿಸಿದರು. ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ, ಯುದ್ಧವನ್ನಲ್ಲ ಎಂದು ಅಭಿಪ್ರಾಯಪಟ್ಟರು. ಕೋವಿಡ್‌ನಂತಹ ಸವಾಲುಗಳನ್ನು ನಾವು ಒಟ್ಟಾಗಿ ಜಯಿಸಿದ್ದೇವೆ. ಮುಂದಿನ …

Read More »

ಭಾರತ ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ ಹೊರತು ಯುದ್ಧವನ್ನಲ್ಲ: ಪ್ರಧಾನಿ ಮೋದಿ

ಕಝನ್: ಭಾರತ ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆಯೇ ಹೊರತು ಯುದ್ಧವನ್ನಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬ್ರಿಕ್ಸ್ ಸಮಾವೇಶದಲ್ಲಿ ಪ್ರತಿಪಾದಿಸಿದ್ದಾರೆ. ಆ ಮೂಲಕ ರಷ್ಯಾ-ಉಕ್ರೇನ್ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಕರೆ ನೀಡಿದ್ದಾರೆ. ತಮ್ಮ ಭಾಷಣದಲ್ಲಿ ಯುದ್ಧ, ಆರ್ಥಿಕ ಅನಿಶ್ಚಿತತೆ, ಹವಾಮಾನ ಬದಲಾವಣೆ ಹಾಗೂ ಉಗ್ರವಾದದ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಜಗತ್ತನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಬ್ರಿಕ್ಸ್ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ಹೇಳಿದ್ದಾರೆ. ಕೋವಿಡ್ …

Read More »

ಬ್ರಿಕ್ಸ್ ಭದ್ರತಾ ಸಲಹೆಗಾರರ ಸಮಾವೇಶ: ಅಜಿತ್ ದೋವಲ್ ಸೆರ್ಗೆಯ್ ಶೋಯಿಗು ಮಾತುಕತೆ

ರಷ್ಯಾ: ಬ್ರಿಕ್ಸ್ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ರಷ್ಯಾಕ್ಕೆ ಆಗಮಿಸಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ರಷ್ಯಾದ ಎನ್‌ಎಸ್‌ಎ ಸೆರ್ಗೆಯ್ ಶೋಯಿಗು ಅವರೊಂದಿಗೆ ಮಾತುಕತೆ ನಡೆಸಿದರು. ಉಕ್ರೇನ್‌ನೊಂದಿಗಿನ ಎರಡೂವರೆ ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಶಾಂತಿ ಪ್ರಸ್ತಾವವನ್ನು ದೋವಲ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ದೋವಲ್ ಮತ್ತು ಶೋಯಿಗು ಪರಸ್ಪರ ಹಿತಾಸಕ್ತಿಗೆ ಸಂಬಂಧಿಸಿದ ಪ್ರಮುಖ …

Read More »

ಕಾಣೆಯಾಗಿದ್ದ ರಷ್ಯಾ ಹೆಲಿಕಾಪ್ಟರ್ ಪತನ:17 ಮಂದಿ ಸಾವು

ಮಾಸ್ಕೋ: ರಷ್ಯಾದ ಪೂರ್ವದಲ್ಲಿ ಕಾಣೆಯಾದ ಹೆಲಿಕಾಪ್ಟರ್ ಕೊನೆಯ ಬಾರಿಗೆ ಸಂಪರ್ಕಿಸಲಾದ ಸ್ಥಳದ ಬಳಿ 900 ಮೀಟರ್ ಎತ್ತರದಲ್ಲಿ ಪತ್ತೆಯಾಗಿದೆ. ಅದರಲ್ಲಿದ್ದ 17 ಜನರ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ.22 ಮಂದಿಯಲ್ಲಿ ಕಾಣೆಯಾದ ಇತರ ಸದಸ್ಯರ ಹುಡುಕಾಟ ಮುಂದುವರೆದಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಹೆಲಿಕಾಪ್ಟರ್ ನಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಕಳಪೆ ಗೋಚರತೆಯಿಂದಾಗಿ ಹೆಲಿಕಾಪ್ಟರ್ ಪತನಗೊಂಡಿರಬಹುದು ಎಂದು ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ. ಎಂಐ-8 ಹೆಲಿಕಾಪ್ಟರ್ ಶನಿವಾರ ಕಮ್ಚಾಟ್ಕಾ …

Read More »

ರಾತ್ರೋರಾತ್ರಿ ರಷ್ಯಾ ಮೇಲೆ ಡ್ರೋನ್‌ ದಾಳಿ ನಡೆಸಿದ ಉಕ್ರೇನ್‌

ಕೀವ್‌- ಮಾಸ್ಕೋ ಮತ್ತು ರಷ್ಯಾದ ಹಲವಾರು ಇತರ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಉಕ್ರೇನ್‌ ರಾತ್ರೋರಾತ್ರಿ ಡ್ರೋನ್‌ ದಾಳಿ ನಡೆಸಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ನೈಋತ್ಯದಲ್ಲಿರುವ ಬ್ರಿಯಾನ್ಸ್ಕ್ ನ ಗಡಿ ಪ್ರದೇಶದ ಮೇಲೆ ಕನಿಷ್ಠ 12 ಉಕ್ರೇನ್‌ ಉಡಾವಣೆ ಮಾಡಿದ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ ಎಂದು ಪ್ರದೇಶದ ಗವರ್ನರ್‌ ಅಲೆಕ್ಸಾಂಡರ್‌ ಬೊಗೊಮಾಜ್‌ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ಕುರ್ಸ್ಕ್‌ ಪ್ರದೇಶದ ಮೇಲೆ ಎರಡು ಮಾನವರಹಿತ ದಾಳಿ ವಾಹನಗಳನ್ನು ಸಹ ನಾಶಪಡಿಸಲಾಗಿದೆ, ಉಕ್ರೇನ್ನ ಆಕ್ರಮಣದಿಂದ ಭಾಗಶಃ …

Read More »

ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ: ವ್ಲಾಡಿಮಿರ್ ಪುಟಿನ್.

ವ್ಲಾಡಿವೋಸ್ಟಾಕ್ (ರಷ್ಯಾ): ರಷ್ಯಾದ ಬಂದರು ಪಟ್ಟಣ ವ್ಲಾಡಿವೋಸ್ಟಾಕ್‌ನಲ್ಲಿ ನಡೆದ 8ನೇ ಈಸ್ಟರ್ನ್ ಎಕನಾಮಿಕ್ ಫೋರಂನಲ್ಲಿ (ಇಇಎಫ್‌) ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಭಾರತದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ನೀತಿಯನ್ನು ಶ್ಲಾಘಿಸಿದ್ದಾರೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಉತ್ತೇಜಿಸುವಲ್ಲಿ ಮೋದಿ ಸರಿಯಾದ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.ರಷ್ಯಾ ನಿರ್ಮಿತ ಕಾರುಗಳ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪುಟಿನ್, “ನಮ್ಮಲ್ಲಿ ಆಗ (90 ರ ದಶಕದಲ್ಲಿ) …

Read More »