Breaking News

ಜನರ ಆಕ್ರೋಶಕ್ಕೆ ಬಲಿಯಾದ ಚಿರತೆ.

ಚಿತ್ರದುರ್ಗ: ಮಾವಿನ ಮರದ ಮೇಲಿಂದ ವ್ಯಕ್ತಿಯೊಬ್ಬರ ಮೇಲೆ ಎರಗಿ ದಾಳಿ ಮಾಡಿದ ಚಿರತೆ ಮೇಲೆ ಹಳ್ಳಿಯ ಜನರು ದಾಳಿ ನಡೆಸಿರುವ ಘಟನೆ ಹೊಸದುರ್ಗ ತಾಲೂಕು ಕುರುಬರಹಳ್ಳಿಯಲ್ಲಿ ನಡೆದಿದೆ.ಬೆಳಗ್ಗೆ 6 ಗಂಟೆಗೆ ಕಾಣಿಸಿಕೊಂಡ ಚಿರತೆ ಇಬ್ಬರು ಗ್ರಾಮಸ್ಥರ ಮೇಲೆ ದಾಳಿ ಮಾಡಿತ್ತು. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಬೇಜವ್ದಾರಿತನ ತೋರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಚಿರತೆಯ ಮೇಲೆ ದಾಳಿ‌ ನಡೆಸಿದ್ದಾರೆ. ಮರ ಹತ್ತಿ ತಪ್ಪಿಸಿಕೊಳ್ಳಲು ಯತ್ನಿಸಿದ ಚಿರತೆಯ ಬೆನ್ನಟ್ಟಿ ಚಿರತೆಯನ್ನು‌ ಕೊಂದಿದ್ದಾರೆ.ಜನರ ಆಕ್ರೋಶಕ್ಕೆ ತುತ್ತಾದ ಚಿರತೆ ದಾಳಿಯಿಂದ ಮೃತಪಟ್ಟಿದೆ. ಗ್ರಾಮಸ್ಥರ ಕೋಪದ ಮುಂದೆ ಅರಣ್ಯ ಇಲಾಖೆಯ ಅಧಿಕಾರಿಗಳು‌ ಅಸಹಾಯಕರಾದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *