Breaking News

ರಾಜ್ಯದಲ್ಲಿ ಸರ್ಕಾರದ ನಡೆ ವಿರುದ್ಧ ರಾಜ್ಯದ ಜನ ನಿರಾಶರಾಗಿದ್ದಾರೆ: ಬೈರತಿ ಬಸವರಾಜ

ಹುಬ್ಬಳ್ಳಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಎನ್ ಡಿಎ ಅಭ್ಯರ್ಥಿಗಳ ಗೆಲುವು ನಿಶ್ಚಿತ, ರಾಜ್ಯದಲ್ಲಿ ಸರ್ಕಾರದ ನಡೆ ವಿರುದ್ಧ ರಾಜ್ಯದ ಜನ ನಿರಾಶರಾಗಿದ್ದಾರೆಂದು ಮಾಜಿ ಸಚಿವ ಬೈರತಿ ಬಸವರಾಜ ಹೇಳಿದರು.

ಬಿಜೆಪಿಯ ಎಂಟು ಜನ ಶಾಸಕರು ಕಾಂಗ್ರೆಸ್‌ಗೆ ಹೋಗ್ತಾರೆ ಎಂಬ ಸೋಮಶೇಖರ್ ಹೇಳಿಕೆ ವಿಚಾರ, ಸುಮ್ಮನೇ ಈ ರೀತಿ ಸುಳ್ಳು ಹೇಳಿಕೆ ನೀಡೋದು ಸರಿಯಲ್ಲ. ಅವರು ನಮ್ಮ ಪಕ್ಷದಿಂದ ಒಂದು ಕಾಲು ಹೊರಗಿಟ್ಟು ಈ ರೀತಿ ಮಾತನಾಡುತ್ತಿದ್ದಾರೆ. ಯಾವ್ಯಾವ ಶಾಸಕರು ಹೋಗುತ್ತಾರೆ ಅವರ ಹೆಸರು ಹೇಳಬೇಕಲ್ವಾ…? ಎಸ್.ಟಿ.ಸೋಮಶೇಖ‌ರ್ ಅದನ್ನ ಸ್ಪಷ್ಟಪಡಿಸಲಿ. ನಮ್ಮ ಮೇಲೆ ಅಂತಹ ಅಭಿಪ್ರಾಯಗಳು ಇದ್ದರೆ ನಾವ್ಯಾಕೆ ನಾಮಪತ್ರ ಸಲ್ಲಿಸೋಕೆ ພ໖..?

ಇನ್ನು ಬಿಜೆಪಿ ಕುಟುಂಬ ರಾಜಕಾರಣ ವಿಚಾರ, ನಮ್ಮಲ್ಲಿ ಯಾವುದೇ ಕುಟುಂಬ ರಾಜಕಾರಣ ಪ್ರಶ್ನೆಯೇ ಇಲ್ಲ. ಬೊಮ್ಮಾಯಿಯವರು ಅವರ ಮಗನಿಗೆ ಟಿಕೆಟ್ ಬೇಡ ಎಂದಿದ್ದರು. ರಾಷ್ಟ್ರೀಯ ನಾಯಕರೇ ನಿರ್ಧಾರ ಮಾಡಿದಾಗ ಬೇಡ ಎನ್ನಲು ಸಾಧ್ಯವಿಲ್ಲ. ಹಿರಿಯ ನಾಯಕರ ನಿರ್ಧಾರವನ್ನ ತಿರಸ್ಕಾರ ಮಾಡೋದು ಸಮಂಜಸವಲ್ಲ. ಈ ನಿಟ್ಟಿನಲ್ಲಿ ಪಕ್ಷದ ಹಿರಿಯ ನಾಯಕತ ನಿರ್ಧಾರದ ಮೇಲೆ ಭರತ್ ಬೊಮ್ಮಾಯಿ ಕಣಕ್ಕಿಳಿದಿದ್ದಾರೆ ಎಂದರು.

Share News

About Shaikh BigTv

Check Also

ಮನೆಯಲ್ಲೇ ಪೆನ್ನಿ ಡ್ರಗ್ಸ್‌ ಮಾರಾಟ – ಆರೋಪಿಗಳನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ ಆದಿತಿ!

ಬೆಳಗಾವಿ : ಕುಂದಾನಗರಿ ಬೆಳಗಾವಿ ಡ್ರಗ್ಸ್ ಅಡ್ಡೆ ಆಗ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ. ಸುಳಗಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ಅಡಗಿಸಿಕೊಂಡಿದ್ದ …

Leave a Reply

Your email address will not be published. Required fields are marked *