Breaking News

ಬಡತನದಲ್ಲಿ ಸರ್ಕಾರಿ ಕೋಟಾದಡಿಯಲ್ಲಿ ಸೀಟು ಪಡೆದ ಯುವತಿಗೆ ಕಮಿಷನರ್ ಎನ್‌. ಶಶಿಕುಮಾ‌ರ್ ಸನ್ಮಾನ

ಹುಬ್ಬಳ್ಳಿ: ನಗರದ ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿರುವ ಹಪ್ಪಾ ಬಾನು ಎಂಬ ಯುವತಿ ಬಡತನದಲ್ಲಿಯೂ ಕೂಡಾ ಸರ್ಕಾರಿ ಕೋಟಾದಡಿಯಲ್ಲಿ ಕೊಪ್ಪಳ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಪಡೆದುಕೊಂಡ ಹಿನ್ನೆಲೆಯಲ್ಲಿ ಹು-ಧಾ ಪೊಲೀಸ್ ಕಮಿಷನ‌ರ್ ಎನ್‌. ಶಶಿಕುಮಾ‌ರ್ ಹಪ್ಪಾ ಬಾನುಗೆ ಸನ್ಮಾನ ಮಾಡಿದರು.

ಹಪ್ಪಾ ಬಾನು ತಂದೆ ಬಡತನದಲ್ಲಿದ್ದರೂ ಕೂಡಾ ಮಗಳಿಗೆ ಉನ್ನತ ವ್ಯಾಸಂಗ ಕೊಡಿಸಬೇಕು ಎಂದು ಹಗಲು ರಾತ್ರಿ ದುಡಿದು ಮಗಳಿಗೆ ಉತ್ತಮ ವ್ಯಾಸಂಗ ಮಾಡಿಸಿದ್ದಾರೆ. ಮಗಳು ಕೂಡಾ ತಂದೆ- ತಾಯಿಯ ಆಶಯದಂತೆ ಚೆನ್ನಾಗಿ ಕಾಲೇಜು ವಿದ್ಯಾಭ್ಯಾಸ ಮಾಡಿ ಸರ್ಕಾರಿ ಕೋಟಾದಡಿಯಲ್ಲಿ MBBS ಸೀಟನ್ನು ಗಿಟ್ಟಿಸಿಕೊಂಡಿದ್ದಾಳೆ.

ಹೀಗಾಗಿ ಬಡತನದ ನಡುವೆಯೂ ಉನ್ನತ ವ್ಯಾಸಂಗ ಮಾಡಲು ಮಗಳಿಗೆ ಪ್ರೋತ್ಸಾಹ ಕೊಟ್ಟ ತಂದೆ-ತಾಯಿಯ ಕಾರ್ಯಕ್ಕೆ ಮೆಚ್ಚಿ ಕಮಿಷನ‌ರ್ ಎನ್. ಶಶಿಕುಮಾ‌ರ್ ಸನ್ಮಾನಿಸಿ, ನಿಮ್ಮ ಮಗಳ ವ್ಯಾಸಂಗಕ್ಕೆ ನಾನು ಕೂಡಾ ಸಹಾಯ ಮಾಡುತ್ತೇನೆ ಎಂದು ಪೋಷಕರಿಗೆ ಧೈರ್ಯವನ್ನು ತುಂಬಿದ್ದಾರೆ.

Share News

About Shaikh BigTv

Check Also

ಹುಬ್ಬಳ್ಳಿ. ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ನಿರಸ ಪ್ರತಿಕ್ರಿಯೆ

ಕನ್ನಡ ಪರ ಹೋರಾಟಗಾರ ವಾಟನಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. …

Leave a Reply

Your email address will not be published. Required fields are marked *