ಕಲಘಟಗಿ : ಮುತ್ತಗಿ ಗ್ರಾಮದ ಕಲುಷಿತ ನೀರು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕಾರ್ಯಕರ್ತರೊಂದಿಗೆ ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕರೆ ಮಾಡಿ ರೋಗಿಗಳ ಆರೋಗ್ಯದ ಬಗ್ಗೆ ವಿಚಾರಿಸಿ ಕೆಲವರೊಂದಿಗೆ ಮಾತನಾಡಿ ದೈರ್ಯಗೆಡದಂತೆ ತಿಳಿಸಿದರು.
ಹಾಗೂ ಚಿಕಿತ್ಸೆ ಪಡೆಯುತ್ತಿರುವ ೪೪ ರೊಗಿಗಳಿಗೆ ಸಂತೋಷ್ ಲಾಡ್ ಪೌಂಢಷನ್ ವತಿಯಿಂದ ತಲಾ ಒಬ್ಬ ರೋಗಿಗೆ 2 ಸಾವಿರ ರೂಗಳಂತೆ ಸಹಾಯಧನವನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಸಚಿವರ ಆಪ್ತ ಸಹಾಯಕ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಎಸ್.ವಿ ತಡಸಮಠ, ಸುಧೀರ ಬೊಳಾರ, ಬಾಳು ಖಾನಾಪೂರ, ಅಜಮತ್ ಜಾಗೀರಾದಾರ್, ಹನುಮಂತ ಚವರಗುಡ್ಡ, ಯಲ್ಲಪ್ಪ ಕುಂದಗೋಳ, ನಿಂಗಪ್ಪ ಬೆಳ್ಳಿವಾಲೆ, ಚನ್ನಬಸ್ಸು ಜಮ್ಮಿಹಾಳ, ಹನುಮಂತ ಹರೀಜನ, ಶೇಖಪ್ಪ ಲಮಾಣಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

