Breaking News

ವಿಜೃಂಭಣೆಯಿಂದ ನೆರವೇರಿದ ತೆಪ್ಪದ ತೇರು ಮಹಾ ರಥೋತ್ಸವ

ಕುಂದಗೋಳ : ಪಟ್ಟಣದ ಕೆರೆಯಂಗಳ ಮತ್ತು ಅಗಸಿಹೊಂಡ ತುಂಬಿದ ಹಿನ್ನೆಲೆಯಲ್ಲಿ ಇಂದು ತೆಪ್ಪದ ತೇರು ಮಹಾ ರಥೋತ್ಸವ ವಿಜೃಂಭಣೆಯಿಂದ ಸಾಗಿದೆ.

ಮೊದಲು ಕೆರೆಯಂಗಳದಲ್ಲಿ ನಡೆದ ತೆಪ್ಪದ ರಥೋತ್ಸವ ಬಳಿಕ ಅಗಸಿ ಹೊಂಡಕ್ಕೆ ಸಾಗಿ ಭಜನೆ ಮತ್ತು ತತ್ವಪದಗಳ ನಡುವೆ ಕೆರೆಯಂಗಳವನ್ನು ಯಶಸ್ವಿಯಾಗಿ ದಾಟಿ ಅಗಸಿಹೊಂಡದಲ್ಲಿ ಯಶಸ್ವಿಯಾಗಿ ಜರುಗಿತು.

ತೆಪ್ಪದ ರಥೋತ್ಸವದ ವೇಳೆ ಕೇಸರಿ ಧ್ವಜಗಳು ಯುವಕರ ಕೇಕೆ, ಶಿಳ್ಳೆ, ಚಪ್ಪಾಳೆ ಕೇಳಿ ಬಂದರೇ ಹಿರಿಯ ನಾಗರೀಕರಿಂದ ಹಿಡಿದು ಚಿಕ್ಕ ಮಕ್ಕಳವರೆಗೂ ಎಲ್ಲರೂ ನೀರಿನಲ್ಲಿ ಈಜಾಡಿ ಸಂತೋಷಪಟ್ಟರು.

ಶಿಥಿಕಂಠೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಅಭಿನವ ಕಲ್ಯಾಣಪುರ ಬಸವಣ್ಣಜ್ಜನವರು, ಶಿವಾನಂದ ಮಠದ ಮಹಾಂತ ಸ್ವಾಮಿಗಳು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು ಗ್ರಾಮದ ಮುಖಂಡರು ಭಾಗವಹಿಸಿದ್ದರು.

Share News

About Shaikh BigTv

Check Also

ಉಡುಪಿ: ಮದುವೆ ನಿರಾಕರಿಸಿದ ವ್ಯಕ್ತಿಯನ್ನು ಬೆದರಿಸಿ 42ಲಕ್ಷ ರೂ. ಹಣ ವಸೂಲಿ; ಶಿಕ್ಷಕಿ ಸಹಿತ ಇಬ್ಬರ ಬಂಧನ

ಉಡುಪಿ: ಮದುವೆ ಪ್ರಸ್ತಾಪ ನಿರಾಕರಿಸಿದ ವ್ಯಕ್ತಿಗೆ ಸುಳ್ಳು ಪ್ರಕರಣ ದಾಖಲಿಸುವುದಾಗಿ ಬೆದರಿಸಿ ₹42.97 ಲಕ್ಷ ವಸೂಲಿ ಮಾಡಿ ವಂಚಿಸಿದ ಆರೋಪದಲ್ಲಿ …

Leave a Reply

Your email address will not be published. Required fields are marked *