ಬೆಂಗಳೂರು: ಕೃಷಿ ಇಲಾಖೆಯ ತರಬೇತಿ ಕೇಂದ್ರ, ಬೀಜೋತ್ಪಾದನ ವಿಭಾಗ ಸೇರಿದಂತೆ ವಿವಿಧ ಶಾಖೆಗಳನ್ನು ಒಂದೇ ಸೂರಿನಡಿ ತರುವುದಕ್ಕಾಗಿ ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಸ್ಥಾಪನೆ ಮಾಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಬೀಜೋತ್ಪಾದನೆ ಕೇಂದ್ರ, ಜಿಲ್ಲಾಕೃಷಿ ತರಬೇತಿ ಕೇಂದ್ರ, ಜೈವಿಕ ನಿಯಂತ್ರಣ, ಪರತಂತ್ರ ಜೀವಿ ಪ್ರಯೋಗಾಲಯಗಳನ್ನು ಒಂದೇ ಸೂರಿನಡಿ ತರಲಾಗಿದೆ. ಈ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗುವುದು ಎಂದು ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





