ನವಲಗುಂದ: ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಕಾರ್ತಿಕ ಮಾಸದ ದಿಂಡಿ ಪಾದಯಾತ್ರೆಯನ್ನು ತಾಲೂಕಿನ ಅಳಗವಾಡಿ ಗ್ರಾಮದ ಶ್ರೀ ಹರಿಮಂದಿರ ದೇವಸ್ಥಾನದ ಭಕ್ತರು ಕೈಗೊಂಡರು.
ಸತತವಾಗಿ 11ವರ್ಷಗಳ ಕಾಲ ಪಾದಯಾತ್ರೆ ಮಾಡಿದ ಈ ಗ್ರಾಮದ ಭಕ್ತರು ಈ ಬಾರಿ 12ವರ್ಷದ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇನ್ನೂ ಯಾತ್ರಾರ್ಥಿಗಳು ಪಂಡರಾಪುರ ತಲುಪಲು 15ದಿನ ತೆಗೆದುಕೊಳ್ಳುವರು.
ಪ್ರತಿ ದಿನ ಇವರ ಪಾದಯಾತ್ರೆಗೆ ಒಬ್ಬೊಬ್ಬರಂತೆ ಭಕ್ತರು ಪ್ರಸಾದದ ವ್ಯವಸ್ಥೆ ಕಲ್ಪಿಸಿದ್ದಾರೆ. ಪಾದಯಾತ್ರೆಯಲ್ಲಿ ಶ್ರೀ ಹರಿಯ ಸ್ಮರಣೆ, ಕೀರ್ತನೆ ಭಕ್ತರನ್ನು ಭಕ್ತಿಯತ್ತ ಸೆಳೆಯುವದು.
bigtvnews | Hubli Dharwad News | Kannada News | Karnataka News Hubli News | News In Hubli | Local news

