ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ವಾಣಿಜ್ಯ ನಹರಿಯಲ್ಲಿಂದು ನಗರ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವ ಮೂಲಕ ಗಮನ ಸೆಳೆದರು.
ನಗರ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವ ಮೂಲಕ ಸಾರಿಗೆ ಸಂಸ್ಥೆಯ ಸಮಸ್ಯೆಗಳನ್ನು ಆಲಿಸಿದ್ದಾರೆ. ಹುಬ್ಬಳ್ಳಿಯ ಸಿಬಿಟಿಯಿಂದ ಕಿತ್ತೂರು ರಾಣೆ ಚೆನ್ನಮ್ಮ ವೃತ್ತವರಿಗೆ ನಗರ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಟಿಕೇಟ್ ಪಡೆದು, ಪ್ರಯಾಣ ಮಾಡಿದ್ರು. ಬಸ್ ಚಾಲಕರು ಹಾಗೂ ನಿರ್ವಾಹಕರ ಸಮಸ್ಯೆ ಹಾಗೂ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದ್ದಾರೆ. ಇನ್ನು ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಸ್ವಚ್ಛತೆ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





