ಕುಂದಗೋಳ : ಕೌಶಲ್ಯ ಅಭಿವೃದ್ಧಿ ಕೈಗಾರಿಕ ತರಭೇತಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿ ವೃತ್ತಿ ಮಾರ್ಗದರ್ಶನ ಮತ್ತು ಸಂಚಾರಿ ನೋಂದಣಿ ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಶಿವಾನಂದ ಬೆಂತೂರ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಪಾಲಕರ ಆಸೆಯಂತೆ ತಾವುಗಳು ಜ್ಞಾನವನ್ನು ಪಡೆದು ವೃತ್ತಿ ಬದುಕು ಸೃಷ್ಟಿಸಿಕೊಳ್ಳಿರಿ ವಿದ್ಯಾರ್ಥಿಗಳೇ ತಮ್ಮ ಬದುಕಿನ ಮಾರ್ಗವನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು ಸರ್ಕಾರ ಯುವ ನಿಧಿ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಸಹಾಯ ಧನ ಅನುಕೂಲ ಮಾಡುತ್ತಿದೆ ಎಂದು ತಿಳಿಸಿದರು.
ಈ ವೇಳೆ ವಿದ್ಯಾರ್ಥಿಗಳಿಗೆ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು ರಾಜೀವ ಪುಟ್ಟಣ್ಣವರ, ಹಿರಿಯ ನಿವೃತ ಶಿಕ್ಷಕರು ಗ್ರಾಪಂ ಸದಸ್ಯರು ಯಲ್ಲಪ್ಪಗೌಡ ಪಾಟೀಲ, ಬಸವರಾಜ ನಾಯ್ಕರ್, ಇರ್ಷಾದಅಹ್ಮದ ಮುಲ್ಲಾ ಖಯಿಮ್ ನಾಲಬಂಧ ಸೇರಿದಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹುಬ್ಬಳ್ಳಿ ಅಧಿಕಾರಿ ವರ್ಗ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

