ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಮೂಲದ ಈಕೆಯನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗರೇಕಾಲುವೆ ನಿವಾಸಿ ಅಡುಗೆಭಟ್ಟ ಸತೀಶ್ ಎನ್ನುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.ವಿನುತ ಮನೆಯ ಬೆಡ್ ರೂಂನಲ್ಲಿ ಶವವಾಗಿದ್ದಾಳೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದೆ.ವಿನುತಾಗೆ ಈಗಾಗಲೇ ಮದುವೆಯಾಗಿದ್ದು ಮಗು ಸಹ ಇದೆ. ಆದರೂ ಸಹ ವಿನುತಾ ಗ್ರಾಮದ ಯುವಕನೋರ್ವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಹಲವು ಬಾರಿ ಕರೆ ಮಾಡಿ, ಮನೆಗೆ ಬರುವಂತೆ ಹೇಳಿದ್ದಾಳಂತೆ. ಆದರೆ ಬಾಲರಾಜು ಎಲ್ಲಿ ಇದ್ದನೋ ಗೊತ್ತಿಲ್ಲ. ಸಕಾಲಕ್ಕೆ ವಿನುತಾಳ ಮನೆಗೆ ಹೋಗಿಲ್ಲ. ಇದರಿಂದ ಮನನೊಂದ ವಿನುತಾ ಆತ್ಮಹತ್ಯೆಗೆ ಶರಣಾಗಿರಬಹದು ಎನ್ನುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

