Breaking News

ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್‌ ಪಾರ್ಟಿ ಇಡೀ ದೇಶದಲ್ಲಿ ಸುಳ್ಳು ಆಶ್ವಾಸನೆ ಕೊಟ್ಟಿದೆ. ಇಡೀ ರಾಜ್ಯವನ್ನ ದಿವಾಳಿಯತ್ತ ನೂಕುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ನವರು ಆಮ್ ಆದ್ಮ ಪಕ್ಷವನ್ನು ಅನುಸರಿಸಿದರು. ಅನೇಕ ರಾಜ್ಯದಲ್ಲಿ ಆಮ್ ಆದ್ಮ ಪಕ್ಷ ಕಾಂಗ್ರೆಸ್‌ ಪಕ್ಷವನ್ನು ಕಿತ್ತು ಒಗೆದಿದೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ 100% ಜೀರೋ. ಚುನಾವಣೆ ವೇಳೆ ಜನರಿಗೆ ಮಂಕು ಬೂದಿ ಎರಚಿ, ನಂತರ ರದ್ದು ಮಾಡುವ ಮೂಲಕ ಮೋಸ ಮಾಡ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಐದು ಗ್ಯಾರಂಟಿಗಳನ್ನು ನಾವು ಪೂರೈಸಿದ್ದೇವೆ ಅಂತಾರೆ, ಎಲ್ಲಿ ಪೂರೈಸಿದ್ದಾರೆ? 2023-24ರಲ್ಲಿ ಪದವಿ ಮುಗಿಸಿದ ಯಾವ ಯುವಕರಿಗೆ ಯುವಶಕ್ತಿ ಬಂದಿದೆ. ಗೃಹಲಕ್ಷ್ಮಿ, ಶಕ್ತಿ ಯೋಜನೆ ಅಷ್ಟೇ ಆರಂಭ ಮಾಡಿದ್ದಾರೆ. ಮುನಿಯಪ್ಪನವರು ಇನ್ನು 5 ಕೆಜಿ ಅಕ್ಕಿ ಕೊಡ್ತವೆ ಅಂದಿದ್ದಕ್ಕೆ ಮುಕ್ತ ಕಂಠದಿಂದ ಖರೀದಿ ಮಾಡ್ತವೆ ಅಂದ್ರು, ಬರ ಇರುವಂತಹ ಸಂದರ್ಭದಲ್ಲಿ ನಾವು ಅಕ್ಕಿ ಕೊಟ್ಟಿದ್ದೇವೆ. 32 ರೂಪಾಯಿ ಇದ್ದಿದ್ದು 28 ರೂಪಾಯಿಗೆ ಕೊಡ್ತವೆ ಅಂತ ಹೇಳಿದ್ವಿ. ಉದ್ರಿ ಕೊಡ್ತವೆ ಅಂತ ಅಂದ್ರು ತೆಗೆದುಕೊಳ್ಳೋಕೆ ಇವರತ್ರ ದುಡ್ಡಿಲ್ಲ,ಅನ್ನಭಾಗ್ಯ 10 ಕೆಜಿ ಅಕ್ಕಿ ಅಂತ ಭಾಷಣ ಮಾಡಿದವರು, ನಮ್ಮ ಅಕ್ಕಿಯನ್ನು ನಾವು ಅನ್ನಭಾಗ್ಯ ಕೊಟ್ಟಿ ಅಂತ ಹೇಳ್ತಾ ತಿರುಗಾಡ್ತಾರೆ ಎಂದರು.

Share News

About Shaikh BigTv

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *