Breaking News

ಧಾರವಾಡ ಜಿಲ್ಲೆಯಲ್ಲೂ ಕೂಡ ಬರೋಬ್ಬರಿ 483 ಜಾಗವನ್ನು ವಕ್ಸ್‌ಗೆ ವರ್ಗಾವಣೆ ಮಾಡಿದ್ದಾರೆ : ಪ್ರಹ್ಲಾದ್‌ ಜೋಶಿ

ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್‌ ಸರ್ಕಾರದಿಂದ ಇಡೀ ರಾಜ್ಯಾದ್ಯಂತ ಸಾವಿರ ಎಕರೆ ಜಾಗವನ್ನು ವಕ್ಸ್‌ಗೆ ವರ್ಗಾವಣೆ ಮಾಡ್ತಿದ್ದಾರೆ. ಅದೇ ರೀತಿ ಧಾರವಾಡ ಜಿಲ್ಲೆಯಲ್ಲೂ ಕೂಡ ಬರೋಬ್ಬರಿ 483 ಜಾಗವನ್ನು ವಕ್ಸ್‌ಗೆ ವರ್ಗಾವಣೆ ಮಾಡಿದ್ದಾರೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ದಾಖಲೆ ಸಮೇತ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ 128 ಜಾಗಗಳು, ಹುಬ್ಬಳ್ಳಿ ಗ್ರಾಮೀಣ ಪ್ರದೇಶದಲ್ಲಿ 38 ಜಾಗಗಳು, ಕುಂದಗೋಳದಲ್ಲಿ 60 ಪ್ರಾಪರ್ಟಿಸ್, ಕುಂದಗೋಳ ತಾಲೂಕಿನ ಬೆಟದೂರದಲ್ಲಿ 28 ಎಕರೆ ವಕ್ಸ್ ಗೆ ಸೇರಿದೆ ಎಂದು ಷರಾ ಬರೆದಿದ್ದಾರೆ. ನವಲಗುಂದದಲ್ಲಿ 1,15,033 s/poot, ಕಲಘಟಗಿಯಲ್ಲಿ 36 ಜಾಗಗಳು ಹೀಗೆ ಸಾಕಷ್ಟು ಪ್ರದೇಶಗಳಲ್ಲಿ ಕಾಂಗ್ರೆಸ್ ಸರ್ಕಾರ ವಕ್ಸ್ ಸಂಸ್ಥೆಗೆ ವರ್ಗಾವಣೆ ಮಾಡ್ತಿದೆ. ಕುಂದಗೋಳ ತಾಲೂಕಿನ ಸಂಶಿಯಲ್ಲಿ ದೇವಸ್ಥಾನ, ರೈಲ್ವೆ ಆಸ್ತಿಯನ್ನು ತೆಗೆದುಕೊಂಡಿದ್ದಾರೆ. ಗುಡಗೇರಿಯಲ್ಲೂ ಶಿಕ್ಷಣ ಇಲಾಖೆ ಜಾಗವನ್ನು ವಕ್ಸ್ ಎಂದು ದಾಖಲು ಮಾಡಿದೆ. ವಕ್ಸ್ ಎಂದು ದಾಖಲೆ ಮಾಡಿ ಕಬರಸ್ತಾನಕ್ಕೆ ಕೊಟ್ಟಿದ್ದಾರೆ.

Share News

About Shaikh BigTv

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *