ಧಾರವಾಡ: ಒನಕೆ ಓಬವ್ವ 18 ನೇ ಶತಮಾನದಲ್ಲಿ ಸಾಮಾನ್ಯ ಮಹಿಳೆ. ಚಿಕ್ಕ ವಯಸ್ಸಿನಲ್ಲಿ ಮದುವೆಯಾಗಿ ತನ್ನ ಜೀವನ ಪ್ರಾರಂಭಿಸಿದಳು. ರಾಜರುಗಳು ತಮ್ಮ ಸೇನಾ ಬಲದಿಂದ ತಮ್ಮ ಸಾಮ್ರಾಜ್ಯವನ್ನು ಕಟ್ಟುವ ಕಾಲದಲ್ಲಿ ಒನಕೆ ಓಬವ್ವಳು ರಾಜ್ಯ ರಕ್ಷಣೆ ಮತ್ತು ರಾಜ್ಯಕ್ಕೆ ನಿಷ್ಠಳಾಗಿ ತೋರಿದ ಧೈರ್ಯ ಮತ್ತು ಸಾಹಸಗಳು ಸ್ತ್ರಿ ಕುಲಕ್ಕೆ ಅತ್ಯಂತ ಅಭಿಮಾನ, ಗೌರವಗಳನ್ನು ತಂದುಕೊಟ್ಟಿವೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾದ ವೀರವನಿತೆ ಒನಕೆ ಓಬವ್ವ ಅವರ ಜಯಂತಿಯ ಅಂಗವಾಗಿ ಒನಕೆ ಓಬವ್ವ ಭಾವಚಿತ್ರಕ್ಕೆ ಪುμÁ್ಪರ್ಚಣೆ ಸಲ್ಲಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಒನಕೆ ಓಬವ್ವಳು, ಯಾವುದೇ ಒಂದು ಸಮಾಜಕ್ಕೆ ಮಾತ್ರ ಸಿಮೀತವಾಗಿಲ್ಲ. ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ಮಕ್ಕಳಿಗೆ ಈ ಧಿಮಂತ ಮಹಿಳೆಯ ಬಗ್ಗೆ ತಿಳಿಸಬೇಕು ಎಂದು ಅವರು ಹೇಳಿದರು.
ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ನಾಮಕರಣ ಮಾಡಿ, ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಒನಕೆ ಒಬ್ಬವ ಒಬ್ಬ ಕೋಟೆ ಕಾವಲುಗಾರನ ಹೆಂಡತಿಯಾಗಿ, ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಹೋರಾಡಿ, ಮಹಿಳೆಯರ ಸಾಧನೆಗೆ ಪ್ರೇರಕಳಾಗಿದ್ದಾಳೆ. ಅವಳ ಗುಣ, ಸಾಹಸಗಳು ನಮಗೆಲ್ಲ ಮಾದರಿ ಆಗಿವೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಕವಿವಿಯ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಜಿ. ಛಲವಾದಿ ಅವರು ಒನಕೆ ಓಬವ್ವನ ಜೀವನದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಯಲ್ಲಪ್ಪ ಮಂಟೂರು, ದೇವಾನಂದ ರತ್ನಾಕರ, ರವಿ ಸಾಂಬ್ರಾಣಿ ಹಾಗೂ ಇಂದುಮತಿ ಶಿರಗಾಂವಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಅಥಿತಿಗಳ ಪರಿಚಯ ಮಾಡಿದರು. ರವಿ ಕುಲಕರ್ಣಿ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

