ಬೆಳಗಾವಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷತೆಯಿಂದ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೊಡಮಾಡುವ ಮುಖ್ಯಮಂತ್ರಿ ಪದಕಕ್ಕೆ ಈ ಬಾರಿ ಬೆಳಗಾವಿಯ ನಾಲ್ವರು ಅಧಿಕಾರಿಗಳು ಭಾಜನರಾಗಿದ್ದಾರೆ.
ರಾಜ್ಯ ಮೀಸಲು ಪೊಲೀಸ್ ಪಡೆಯ ಇಲಾಖೆಯಲ್ಲಿ ವಾದ್ಯ ವೃಂದದಲ್ಲಿ ಕಾರ್ಯ ನಿರ್ವಹಿಸುತ್ತಿರುವ ARSI ಯಲ್ಲಪ್ಪ ಬಾಳಪ್ಪ ಭಜಂತ್ರಿ ಅವರಿಗೆ ಏಪ್ರಿಲ್ 2 ರಂದು ಕೊಡಮಾಡುವ ಮುಖ್ಯಮಂತ್ರಿ ಪದಕ ದೊರೆತಿದ್ದು ಇಲಾಖೆಯ ಹಿರಿಯ ಅಧಿಕಾರಿಗಳು, ಸಂಬಂಧಿಕರು ಸ್ನೇಹಿತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಯಲ್ಲಪ್ಪ ಬಾಳಪ್ಪ ಭಜಂತ್ರಿ 1984ರ ಬ್ಯಾಚ್ ಸಿಬ್ಬಂದಿಯಾಗಿದ್ದು ಪ್ರಸ್ತುತ 2ನೇ ಪಡೆ ಕೆ.ಎಸ್.ಆರ್.ಪಿ ಬೆಳಗಾವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು 1985 ರಿಂದ ಸಾಮಾನ್ಯ ಕರ್ತವ್ಯ ನಿರ್ವಹಿಸಿ. ನಂತರ 1990 ನೇ ಸಾಲಿನಿಂದ ರಿಂದ ಬೆಳಗಾವಿಯ ಮಚ್ಛೆಯ 2ನೇ ಪಡೆಯಲ್ಲಿ ವಾದ್ಯ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಹಿಂದೆ ಹೈದರಾಬಾದ್ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಅಧಿಕಾರಿಗಳ ಅಂತಿಮ ನಿರ್ಗಮನ ಪಥ ಸಂಚಲನದಲ್ಲಿ ಬ್ಯಾಂಡ್ ತಂಡದ ಭಾಗವಾಗಿ ಹಾಗೂ ಮೈಸೂರು ದಸರಾ ಕರ್ತವ್ಯವನ್ನು 17 ವರ್ಷ, ಹಾಗೂ 15 ತಂಡಗಳ ಪ್ರಶಿಕ್ಷಣಾರ್ಥಿಗಳ ಅಂತಿಮ ಪಥ ಸಂಚಲನದಲ್ಲಿ ವಾದ್ಯ ವೃಂದ ತಂಡದಲ್ಲಿ ಕರ್ತವ್ಯ ನಿರ್ವಹಿಸಿ,2 ಬಾರಿ ಐಟಿಬಿಪಿ ಸೆಂಟರ್, ಬೆಳಗಾವಿಯಲ್ಲಿ ಅಂತಿಮ ನಿರ್ವಮನ ಪಥ ಸಂಚಲನದಲ್ಲಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿಯ ಘಟಿಕೋತ್ಸವದಲ್ಲಿ ಭಾಗವಹಿಸಿ ಬ್ಯಾಂಡ್ ತಂಡದಲ್ಲಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ
ಯಲ್ಲಪ್ಪ ಭಜಂತ್ರಿ ಅವರಿಗೆ ಕಮಾಂಡೆಂಟ್ ಹಂಜಾ ಹುಸೇನ್ ಹಾಗೂ ಇಲಾಖೆ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

