ಧಾರವಾಡ ಡಿಜಿಟಲ್ ತಂತ್ರಜ್ಞಾನದ ಭರಾಟೆಯ ಮಧ್ಯೆಯೂ ಫೋಟೊಗ್ರಾಫರ್ ಗಳು ಹಾಗೂ ವಿಡಿಯೋಗ್ರಾಫರ್ ಗಳು ವೃತ್ತಿ ಉಳಿಸಿಕೊಳ್ಳುವುದು ದೊಡ್ಡ ಸವಾಲು ಎಂದು ಡಾ. ವಿಶ್ವನಾಥ ಕೋಟಿ ಹೇಳಿದರು.
ಅವರು ಧಾರವಾಡ ಫೋಟೊ ಮತ್ತು ವಿಡಿಯೋಗ್ರಾಫರ್ ಧಾರವಾಡ
ಸಂಘದ 16ನೇ ವಾರ್ಷೀಕೋತ್ಸವ, ಸಂಸ್ಥಾಪಕ ಆಡಳಿತ ಮಂಡಳಿ ಸದಸ್ಯರಿಗೆ ಅಭಿನಂದನಾ ಮತ್ತು ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು. ಧಾರವಾಡ ಸುವರ್ಣ ಸಾಂಸ್ಕೃತಿಕ ಭವನ, ರಂಗಾಯಣದಲ್ಲಿ ಉದ್ಘಾಟಿಸಿ ಮಾತನಾಡಿದಠು ಪ್ರತಿಯೊಬ್ಬರ ಕೈಯಲ್ಲಿರುವ ಮೊಬೈಲ್ ಕ್ಯಾಮೆರಾಮನ್ ಗಳ ಹಾಗೂ ವಿಡಿಯೋಗ್ರಾಫರ್ ಗಳ ಕೆಲಸ ಕಸಿದುಕೊಳ್ಳುತ್ತಿದೆ. ಮೊಬೈಲ್ ಕೊಡಲಾಗದ್ದನ್ನು ಕೊಡುವ ಮೂಲಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ಕೌಶಲ್ಯ ವೃದ್ಧಿಸಿಕೊಂಡು ಮೊಬೈಲ್ ತಂತ್ರಜ್ಞಾನದ ಸವಾಲು ಎದುರಿಸಬೇಕು ಎಂದರು.
ಧಾರವಾಡ ಫೋಟೊಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಗಳ ಸಂಘ ಮುಂದಿನ 20 ವರ್ಷದಲ್ಲಿರಬಹುದಾದ ಸ್ಥಿತಿಗತಿಗೆ ಅನುಗುಣವಾಗಿ ವೃತ್ತಿಯಲ್ಲಾಗುವ ಮಾರ್ಪಾಡುಗಳನ್ನು ಆಧರಿಸಿ ಯೋಜನೆ ರೂಪಿಸಬೇಕು. ವಿಶೇಷಜ್ಞರು ರೂಪಗೊಳ್ಳುವಂತಾಗಬೇಕು. ಒಗ್ಗಟ್ಟಿನಿಂದ ಮಾತ್ತ ಸಂಘದ ಸದಸ್ಯರು ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ. ಎಲ್ಲ ಸಂದರ್ಭಗಳಲ್ಲಿಯೂ ಸಂಘ ಸದಸ್ಯರ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಹೇಳಿದರು.
ಫೋಟೊಗ್ರಾಫರ್ ಗಳು ವೇದಿಕೆ ಮೇಲಿರುವ ಹತ್ತಾರು ಜನರನ್ನು ನೋಡುತ್ತಿದ್ದರೆ, ವೇದಿಕೆ ಮುಂದೆ ಕುಳಿತ ನೂರಾರು ಜನರು ಫೋಟಾಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಗಳನ್ನು ನೋಡುತ್ತಿರುತ್ತಾರೆ ಎಂಬುದನ್ನು ಲಕ್ಣ್ಯದಲ್ಲಿಡಬೇಕು ಎಂದರು.
ಮುಖ್ಯ ಅಥಿತಿಗಳಾಗಿ ಸಂಘದ ಮಾಜಿ ಅಧ್ಯಕ್ಷರುಗಳಾದ ಶಶಿ ಅಂಗಡಿ , ಅನಿಲ ಕಲಾಲ ರವಿ ಚಿಕ್ಕುಂಬಿ ಅಗಮಿಸಿದ್ದರು, ವಿಶೇಷ ಸನ್ಮಾನ ಹಿರಿಯ ಛಾಯಾಗ್ರಾಹಕರಾದ ನಾರಾಯಣಸಾ ಕಲಬುರ್ಗಿ
ಖಾಸಿಮ ಗಾರವಾಲೆ. ನಾಗರಾಜ ಮಾ. ಹೇಮಣ್ಣವರ ಅವರಿಗೆ ಸನ್ಮಾನಿಸಲಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news





