Breaking News

ವಕ್ಫ್ ಆಸ್ತಿ ವಿವಾದ: ನ.25 ರಿಂದ ಡಿ.25 ರವರೆಗೆ ರಾಜ್ಯಾದ್ಯಂತ ಜನಾಂದೋಲನಕ್ಕೆ ಯತ್ನಾಳ ಕರೆ

ಮೈಸೂರು: ವಕ್ಫ್‌ ಆಸ್ತಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಜನಾಂದೋಲನಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ‌ ನೀಡಿದ್ದಾರೆ.
ಇಂದು ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಈ ರೆಬೆಲ್‌ ಟೀಂ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ವಕ್ಫ್‌ನವರು ವಿಧಾನಸೌಧವು ನಮ್ಮದೇ, ಮೆಜೆಸ್ಟಿಕ್ ಸಹ ನಮ್ಮದೇ. ಅಲ್ಲದೇ ಹೊಯ್ಸಳರ ಕಾಲದ ದೇವಾಲಯವು ನಮ್ಮದೇ ಅನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಮಠಾಧೀಶರು ಸೇರಿ ಅಭಿಯಾನ ನಡೆಸಲಾಗುವುದು ನವೆಂಬರ್ 25 ರಿಂದ ಡಿಸೆಂಬರ್ 25 ರವರಗೆ ಬೀದರ್ ನಿಂದ ಚಾಮರಾಜನಗರದವರೆಗೂ ಜಾಥಾ ನಡೆಯಲಿದೆ. ಈ ಅಭಿಯಾನದಲ್ಲಿ ಯಾರು ಬೇಕಾದರು ಬಂದು ಭಾಗಿಯಾಗಬಹುದು. ಬಿಜೆಪಿಯಿಂದಲೇ ಈ ಅಭಿಯಾನ ನಡೆಯುತ್ತಿರೋದು. ಬಿಜೆಪಿ ರಾಜ್ಯಾಧ್ಯಕ್ಷರು ಬರಲಿ ಎಂದು ನಿಮ್ಮ ಮುಖಾಂತರ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಶಾಸಕರ ಖರೀದಿಗೆ ಯಾರು ಬಂದಿದ್ದರು ಎಂಬುದಕ್ಕೆ ಸಿಎಂ ದಾಖಲೆ ಕೊಡಲಿ ಹಾದಿ-ಬೀದಿಲಿ ಹೋಗೋರು ಹೇಳಿರೋದಲ್ಲ. ಅದನ್ನು ಬಿಟ್ಟು ಸುಮ್ಮನೆ ಏನೇನೋ ಹೇಳಬೇಡಿ ಎಂದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *