ಹುಬ್ಬಳ್ಳಿ: ಉತ್ತರ ಕರ್ನಾಟಕ ನನಗೆ ರಂಗಭೂಮಿ ಇಂದಲೇ ನಂಟು ಇದೆ. ಈ ಭಾಗದ ಕಡೆ ಚಿತ್ರೀಕರಣ ಮಾಡಲು ನನಗೆ ತುಂಬಾ ಇಷ್ಟಾ. ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಚಟ್ನಿ ಅಂದರೆ ಸಖತ್ ಇಷ್ಟಾ ಆಗುತ್ತೆ ಎಂದು ಅಶ್ವತ್ ನಿನಾಸಮ್ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ನರಗುಂದ ಬಂಡಾಯ ಅಂತಹ ಚಿತ್ರ ನೋಡಿದ್ರೆ ರೋಮಾಂಚನ ಆಗುತ್ತೆ. ಇದರಲ್ಲಿ ಪಾತ್ರ ಮಾಡಿದ್ದು ನನಗೆ ತುಂಬಾ ಖುಷಿ ತಂದಿದೆ. ರೈತರು ಪಟ್ಟ ಕಷ್ಟ, ರೈತರ ಹತ್ಯೆ ಕೇಳಿದ್ದೆ ಅಷ್ಟೇ, ಚಿತ್ರದಲ್ಲಿ ಇದನ್ನೆಲ್ಲ ನೋಡಿ ಕಣ್ಣಲ್ಲಿ ನೀರು ಬಂದಿದೆ ಎಂದು ಚಿತ್ರದ ಬಗ್ಗೆ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

