Breaking News

ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳ್ಳತನ

ಹುಬ್ಬಳ್ಳಿ: ಹುಬ್ಬಳ್ಳಿಯ ಗುಡಿಹಾಳ ರೋಡ್ ವಿಶಾಲ ನಗರದ ಸದತ್ ಕಾಲೋನಿ 3ನೇ ಕ್ರಾಸ್ ಬಳಿಯ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೆಟ್ರೋಲ್ ಕಳ್ಳನವು ದಿನ ನಿತ್ಯವೂ ನೆಡೆಯುತ್ತಿರುವುದು ಜನರಿಗೆ ಶಾಕ್ ಕೊಟ್ಟಿದೆ.

ಸದತ್ ಕಾಲೋನಿಯ ನಿವಾಸಿಗಳು ಬೈಕ್‌ನ ಪೆಟ್ರೋಲ್‌ ಕಳ್ಳರಿಂದ ಕಂಗೆಟ್ಟು ಹೋಗಿದ್ದರು. ರಾತ್ರಿ ಬೈಕ್‌ನಲ್ಲಿರುತ್ತಿದ್ದ ಪೆಟ್ರೋಲ್ ಬೆಳಗ್ಗೆ ನೋಡಿದಾಗ ಖಾಲಿ ಖಾಲಿ ಆಗಿರುತ್ತಿತ್ತು. ತಮ್ಮ ಕೆಲಸಕ್ಕೆ ಹೋಗಬೇಕಾದರೆ ಪೆಟ್ರೋಲ್ ಇಲ್ಲದೆ, ತಳ್ಳಿಕೊಳ್ಳುತ್ತ ಹೋಗುವಂತಾಗಿತ್ತು. ಹೀಗಾಗಿ ಸಿಸಿಟಿವಿ ಕ್ಯಾಮೆರಾದಲ್ಲಿ ತೆಗೆದು ನೋಡಿದಾಗ ಮಧ್ಯರಾತ್ರಿ ಯುವಕರ ತಂಡಯೊಂದು ಬೈಕ್‌ ಒಳಗಿನ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ಆ ವಿಡಿಯೋ ಪಬ್ಲಿಕ್ ನೆಕ್ಸ್ ಗೆ ಲಭ್ಯವಾಗಿದೆ. ಈ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಕಳ್ಳತನದ ಬಗ್ಗೆ ಪೊಲೀಸರು ಗಮನ ಹರಿಸಬೇಕಾಗಿದೆ.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *